Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಿರ್ಬಂಧಕ್ಕೆ ಕ್ರಮ

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಿರ್ಬಂಧಕ್ಕೆ ಕ್ರಮ
Bangalore , ಗುರುವಾರ, 9 ಫೆಬ್ರವರಿ 2017 (13:16 IST)
ವಸತಿ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ತಡೆಯಲು ಬಿಬಿಎಂಪಿ ವತಿಯಿಂದ ಸಾರ್ವಜನಿಕ ತಿಳುವಳಿಕೆ ಪ್ರಕಟಣೆ ನೀಡಲಾಗಿದೆ. ವಸತಿ ವಲಯಗಳಲ್ಲಿ ಅನುಮತಿಸಬಹುದಾದ ಉಪಯೋಗಗಳಿಗೆ ವಿರುದ್ದವಾಗಿ ಚಟುವಟಿಕೆ ನಡೆಸುತ್ತಿರುವ ವಾಣಿಜ್ಯೋದ್ಯಮಿಗಳ ಪಟ್ಟಿ ಮಾಡಿ ಅಂತಹ ಚಟುವಟಿಕೆ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಪಾಲಿಕೆಯ ಆರೋಗ್ಯ ನಿರೀಕ್ಷಕರುಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಸಚಿವ ಕೆ.ಜೆ ಜಾರ್ಜ್ ಅವರು ವಿಧಾನಸಭೆಗೆ ತಿಳಿಸಿದರು.
 
ಶಾಸಕ ಎನ್.ಎ ಹ್ಯಾರಿಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭವಿಷ್ಯದಲ್ಲಿ ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ವಸತಿಯೇತರ ಚಟುವಟಿಕೆಗಳಿಗೆ ಟ್ರೇಡ್ ಲೈಸೆನ್ಸ್ ನೀಡುವಾಗ ಅಂತಹ ಕಟ್ಟಡಗಳಿಗೆ ನೀಡಲಾದ ನಕ್ಷೆ ಮಂಜೂರಾತಿ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರದಲ್ಲಿ ನೀಡಲಾದ ಉಪಯೋಗಗಳಿಗೆ ಮಾತ್ರ ಅನುಮತಿಸಲು. ಅನಧಿಕೃತವಾಗಿ ವಸತಿಯೇತರ ಚಟುವಟಿಕೆ ಕೈಗೊಳ್ಳದಂತೆ ಪಾಲಿಕೆಯ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
 
ಇದಲ್ಲದೆ ವಾಣಿಜ್ಯ ತೆರಿಗೆ, ಅಬಕಾರಿ, ತೂಕ ಮತ್ತು ಅಳತೆ ಮಾಪನ ಇಲಾಖೆ, ಜಲಮಂಡಳಿ, ಬೆಸ್ಕಾಂ ಇಲಾಖೆಗಳು ಇಂತಹ ವಸತಿಯೇತರ ಚಟುವಟಿಕೆಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಪಾಲಿಕೆಯಿಂದ ಮಂಜೂರಾದ ನಕ್ಷೆ ಮತ್ತು ಸ್ವಾಧಿನಾನುಭವ ಪ್ರಮಾಣಪತ್ರ ಪಡೆದು ಅನುಮತಿಸಿದ ಉದ್ದೇಶಗಳಿಗೆ ಅನುಮತಿ ನೀಡಲು ನಿರ್ದೇಶನ ನೀಡಲಾಗುವುದು ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲ್ಯೂಫಿಲ್ಮ್ ತೋರಿಸಿ 11ರ ಬಾಲೆಯ ಮೇಲೆ ಅತ್ಯಾಚಾರವೆಸಗಿದ 72ರ ವೃದ್ಧ