ಹೌದು. ಸಿವಿಲ್ ಇಂಜಿನಿಯರ್ ಮಾಡುತ್ತಿರುವ ಭಾರತೀಯ ಝೋನೆಲ್ (21ವರ್ಷ) ವಾಟ್ಸ್ ಆ್ಯಪ್ ನಲ್ಲಿರುವ ವಾಯಿಸ್ ಕರೆಯಲ್ಲಿ ಕಂಡು ಬಂದ ದೋಷವನ್ನು ಪತ್ತೆ ಹಚ್ಚಿದ್ದಾರೆ. ಬಳಕೆದಾರರು ವಾಯಿಸ್ ಕರೆಯಲ್ಲಿ ಮಾತನಾಡುತ್ತಿದ್ದಾಗ ಆ ಕರೆಯನ್ನು ಬಳಕೆದಾರನ ಗಮನಕ್ಕೆ ಬಾರದಂತೆ ವಿಡಿಯೋ ಕಾಲ್ ಗೆ ಬದಲಾಯಿಸಬಹುದಂತೆ. ಹೀಗಾಗಿ ಕರೆ ಸ್ವೀಕರಿಸಿದ ಬಳಕೆದಾರ ಏನು ಮಾಡುತ್ತಿದ್ದಾನೆ ಎಂದು ವೀಕ್ಷಿಸಬಹುದಂತೆ.
ಈ ವಿಚಾರವನ್ನು ಝೋನೆಲ್ ಫೇಸ್ಬುಕ್ ನಡೆಸಿದ ‘ಬಗ್ ಬೌಂಟಿ‘ ಕಾರ್ಯಕ್ರಮದಲ್ಲಿ ತಿಳಿಸಿದ್ದಾನೆ. ಈ ದೋಷ ಕಂಡುಹಿಡಿದ ಝೋನೆಲ್ ಗೆ ಫೇಸ್ಬುಕ್ 3.4 ಲಕ್ಷ ಬಹುವಾನ ನೀಡಿದೆ. ಜೊತೆಗೆ ಫೇಸ್ಬುಕ್ ತನ್ನ ‘ಹಾಲ್ ಆಫ್ ಫೇಮ್ ಲೀಸ್ಟ್‘ನಲ್ಲಿ ಝೆನೆಲ್ ಹೆಸರನ್ನು ಸೇರಿಸಿದೆ. ಹಾಗೇ ಸಮಸ್ಯೆಯನ್ನು 15 ದಿನಗಳ ಒಳಗೆ ಸರಿಪಡಿಸುವುದಾಗಿ ತಿಳಿಸಿದೆ.