ನವದೆಹಲಿ : ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಆರ್ಥಿಕ ನಷ್ಟದಲ್ಲಿರುವ ಕಾರಣ ಅದನ್ನು ಎಂಟಿಎನ್ ಎಲ್ ಸಂಸ್ಥೆಯ ಜೊತೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಬಿಎಸ್ ಎನ್ ಎಲ್ ಹಾಗೂ ಎಂಟಿಎನ್ ಎಲ್ ಸಂಸ್ಥೆಯ ವಿಲೀನಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಇಟ್ಟಿದ್ದು, ಬುಧವಾರ ಸಚಿವ ಸಂಪುಟ ಸಭೆ 4 ಜಿ ತರಂಗಾಂತರ ಹಂಚಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಬಿಎಸ್ ಎನ್ ಎಲ್ ಸಂಸ್ಥೆ ದೇಶದ ಎಲ್ಲಾ ಕಡೆ ತಮ್ಮ ಸೇವೆಯನ್ನು ನೀಡುತ್ತಿದ್ದರೆ, ಎಂಟಿಎನ್ ಎಲ್ ಸಂಸ್ಥೆ ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿತ್ತು. ಇನ್ನು ಮುಂದೆ ಇವೆರಡು ವಿಲೀನವಾಗಿ ದೇಶದ ಎಲ್ಲಾ ಕಡೆ ಸೇವೆಗಳನ್ನು ನೀಡಲಿವೆ.