ಇದಕ್ಕೂ ಮೊದಲು ವೋಡಾಫೋನ್ ತನ್ನ 225 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಎಸ್ ಟಿಡಿ ಮತ್ತು ಲೋಕಲ್ ಕರೆಗಳನ್ನು ಉಚಿತವಾಗಿ ನೀಡುತ್ತಿತ್ತು. ಜೊತೆಗೆ ಪ್ರತಿದಿನ 2 GB ಡೇಟಾ ದೊರೆಯುತ್ತಿತ್ತು.
ಆದರೆ ಈಗ ಈ ಯೋಜನೆಯನ್ನು ಪರಿಷ್ಕರಿಸಿದ ವೋಡಾಫೋನ್ , 500 mb ಡೇಟಾ ವನ್ನು ಹೆಚ್ಚುವರಿಯಾಗಿ ನೀಡುತ್ತಿದೆ. ಗ್ರಾಹಕರು ಈ ಪ್ಲಾನ್ ಅನ್ನು ಅಳವಡಿಸಿಕೊಂಡರೆ ಪ್ರತಿ ದಿನ 100 SMSಗಳನ್ನು ಉಚಿತವಾಗಿ ಸಿಗಲಿದೆ. ಜೊತೆಗೆ ವೊಡಾಫೋನ್ ಪ್ಲೇ ಆಯಪ್ ಮೂಲಕ ಮೂವಿ, ಲೈವ್ ಟಿವಿ ವೀಕ್ಷಿಸುವ ಅವಕಾಶ ದೊರೆಯಲಿದೆ.