ನವದೆಹಲಿ: ಬಜೆಟ್ 2019: ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮೊತ್ತ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದೆ.
ವಿತ್ತಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಿದ್ದು ಇದೊಂದು ಜನಪರ ಬಜೆಟ್ ಎಂದು ಹೇಳಿದರಾದರೂ ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯತಿಯಲ್ಲಿ ಹೆಚ್ಚಳ ಘೋಷಿಸದೆ ನಿರಾಸೆ ಮೂಡಿಸಿದ್ದಾರೆ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚೊಚ್ಚಲ ಬಜೆಟ್‌ನಲ್ಲಿ ವೇತನ ಪಡೆಯುವ ನೌಕರರ ವರ್ಗಕ್ಕೆ ಸಂತಸದ ಸುದ್ದಿ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಆದಾಯ ತೆರಿಗೆ ವಿನಾಯತಿ ಕೇವಲ 5 ಲಕ್ಷ ರೂ.ಗಳವರೆಗೆ ನೀಡಲಾಗಿದೆ. ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವೇತನ ಪಡೆಯುವ ನೌಕರರು ಕಡ್ಡಾಯವಾಗಿ ತೆರಿಗೆ ಪಾವತಿಸಲೇಬೇಕಾಗುತ್ತದೆ.
ಸರಕಾರದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಚಿನ್ನದ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾಗಿ ತಿಳಿಸಿರುವುದು ಮಧ್ಯಮ ವರ್ಗದವರಿಗೆ ಶಾಕ್ ಮೂಡಿಸಿದೆ.