ರಿಲಯನ್ಸ್ ಜಿಯೋ ಉಚಿತ ಸೇವೆಗಳನ್ನು ಬಿಟ್ಟ ಮೇಲೀ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮದೇ ಆದಂತಹ ಯೋಜನೆಗಳನ್ನು ಪ್ರಕಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ಹೊಸಹೊಸ ಪ್ಲಾನ್ ಪ್ರಕಟಿಸುತ್ತಲೇ ಇದೆ.
ಇದೀಗ ಕೇವಲ ರೂ.149ಕ್ಕೆ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಯಾವುದೇ ನೆಟ್‍ವರ್ಕ್‍ಗೆ ಅನಿಯಮಿತ (ಸ್ಥಳೀಯ/ಎಸ್‌ಟಿಡಿ) ಕರೆಗಳನ್ನು 30 ದಿನಗಳ ಕಾಲ ಮಾಡಬಹುದು. ಇದಿಷ್ಟೇ ಅಲ್ಲದೆ ರೂ.439 ರೀಚಾರ್ಚ್ ಮಾಡಿಕೊಳ್ಳುವ ಮೂಲಕ ಮೂರು ತಿಂಗಳು ಉಚಿತ ಕರೆಗಳನ್ನು ಮಾಡಿಕೊಳ್ಳಬಹುದು.
ಆದರೆ ಈ ಯೋಜನೆಯಲ್ಲಿ ದಿನಕ್ಕೆ 30 ನಿಮಿಷಕ್ಕೆ ಮೀರಿ ಕರೆಗಳನ್ನು ಮಾಡಿಕೊಳ್ಳುವ ಸದುಪಾಯ ಇಲ್ಲ. ಈ ಹೊಸ ಯೋಜನೆ ಜನವರಿ 24ರಿಂದ ಹೊಸ ಬಿಎಸ್ಎನ್‍ಎಲ್ ನೆಟ್‌ವರ್ಕನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಅನ್ವಯಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.