ಪ್ರಸಕ್ತ ತಿಂಗಳ ಆರಂಭದಲ್ಲಿ ಬಿರುಗಾಳಿಯಂತೆ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ನೆಟ್‌ವರ್ಕ್, ಉಚಿತ ವೈಸ್ ಕಾಲ್ ಮತ್ತು ಕಡಿಮೆ ದರದ ಡೇಟಾ ನೀಡುವ ಮೂಲಕ ಎದುರಾಳಿ ಕಂಪೆನಿಗಳಿಗೆ ಆಘಾತ ಮೂಡಿಸಿದೆ.
ರಿಲಯನ್ಸ್ ಜಿಯೋ ಕಂಪೆನಿಗೆ ಸೆಡ್ಡು ಹೊಡೆಯಲು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ, ರಿಲಯನ್ಸ್ ಜಿಯೋ ಕೇವಲ 4ಜಿ ಗ್ರಾಹಕರಿಗೆ ಮಾತ್ರ, ಉಚಿತ ವೈಸ್ ಕಾಲ್ ಮತ್ತು ಕಡಿಮೆ ದರದ ಡೇಟಾ ಸೇವೆ ನೀಡುತ್ತಿದೆ. ಆದರೆ, ಬಿಎಸ್‌ಎನ್‌ಎಲ್ ಸಂಸ್ಥೆ 2ಜಿ ಮತ್ತು 3ಜಿ ಗ್ರಾಹಕರಿಗೂ ಉಚಿತ ವೈಸ್ ಕಾಲ್ ಮತ್ತು ಕಡಿಮೆ ದರದ ಡೇಟಾ ಸೇವೆ ನೀಡುವುದಾಗಿ ಘೋಷಿಸಿದೆ.
ಬಿಎಸ್‌ಎನ್‌ಎಲ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ಮಾತನಾಡಿ, ಸಂಸ್ಥೆ ಟೆಲಿಕಾಂ ಮಾರುಕಟ್ಟೆಯನ್ನು ಮತ್ತು ಜಿಯೋ ವಹಿವಾಟಿನ ಬಗ್ಗೆ ತುಂಬಾ ಸೂಕ್ಷ್ಮತೆಯಿಂದ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್‌ನ ಕೆಲ ಯೋಜನೆಗಳು
2ಜಿ, 3ಜಿ ಸೇರಿದಂತೆ ಎಲ್ಲಾ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಉಚಿತ ವೈಸ್ ಕಾಲ್ ಸೇವೆ.
ಮುಂಬರುವ ಜನೆವರಿಯಿಂದ ಲೈಫ್‌ಟೈಮ್ ಉಚಿತ ವೈಸ್ ಕಾಲ್ ಸೇವೆ ಕೇವಲ 2-4 ರೂ.ಗಳ ದರದಲ್ಲಿ.
ಮನೆಯಲ್ಲಿ ಬಿಎಸ್‌ಎನ್‌ಎಲ್ ಬ್ರಾಡ್ ಬ್ಯಾಂಡ್ ಸಂಪರ್ಕ ಹೊಂದಿದವರು ಈ ಸೇವೆ ಪಡೆಯಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ