ನವದೆಹಲಿ: ಮತ್ತೆ ಟೆಲಕಾಂ ಸಂಸ್ಥೆಯ ಪೈಪೋಟಿ ಶುರುವಾಗಿದೆ. ಇದೀಗ ಸರ್ಕಾರೀ ಸಾಮ್ಯದ ಬಿಎಸ್ಎನ್ಎಲ್ ಸರದಿ. ಹೊಸ ಪ್ಲಾನ್ ಒಂದನ್ನು ಹೊರಬಿಟ್ಟಿರುವ ಸಂಸ್ಥೆ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.
‘ಚೌಕ್ಕ 444’ ಹೆಸರಿನ ಈ ಪ್ಲಾನ್ ಗ್ರಾಹಕರಿಗೆ ಭರ್ಜರಿ ಕೊಡುಗೆಯಾಗಲಿದೆ. ಇದು 90 ದಿನಗಳ ಪ್ಲಾನ್ ಆಗಿದ್ದು, ಪ್ರತೀ ದಿನ ಗ್ರಾಹಕರು 4 ಜಿಬಿ ಡಾಟಾ ಪಡೆಯಬಹುದಾಗಿದೆ. 444 ರೂ. ಪಾವತಿಸಿದರೆ ಈ ಭರ್ಜರಿ ಗಿಫ್ಟ್ ಸಿಗಬಹುದು.
ಇತ್ತೀಚೆಗೆ ಬಿಡುಗಡೆ ಮಾಡಿರುವ ಅಗ್ಗದ ಡೇಟಾ ಪ್ಲಾನ್ ಜತೆಗೆ ಇದೂ ಒಂದು ಸೇರ್ಪಡೆಯಾಗಲಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಡೇಟಾ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಹೊರತಂದಿದ್ದೇವೆ ಎಂದು ಬಿಎಸ್ಎನ್ಎಲ್ ಹೇಳಿದೆ.