ನವದೆಹಲಿ : ಬಿ.ಎಸ್.ಎನ್.ಎಲ್ ಇದೀಗ ತನ್ನ ಹೊಸ ಗ್ರಾಹಕರಿಗೆ ಒಂದು ತಿಂಗಳ ಉಚಿತ ಇಂಟರ್ನೆಟ್ ಸೇವೆಯನ್ನು ಘೋಷಿಸಿದೆ.
ಹೌದು. ಇತ್ತೀಚೆಗಷ್ಟೇ ತನ್ನ ಇಂಟರ್ನೆಟ್ ಸೇವೆಗಳಾದ ವಿಂಗ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಇದೀಗ ಒಂದು ತಿಂಗಳ ಉಚಿತ ಸೇವೆಯನ್ನು ನೀಡಲಿದೆ. ಈ ವಿಂಗ್ಸ್ ನಂಬರ್ ಹಾಗೂ ಐಪಿ ಅಡ್ರೆಸ್ ಆಧಾರಿತ ಸೇವೆಯನ್ನು ಪಡೆಯುವುದರ ಮೂಲಕ ಮೊಬೈಲ್ ಹಾಗೂ ಲ್ಯಾಪ್ ಟಾಪ್ ನಿಂದ ಕರೆ ಮಾಡುವ ಹಾಗೂ ಸ್ವೀಕರಿಸುವ ಅವಕಾಶವನ್ನು ಒದಗಿಸುತ್ತದೆ.
ಮೊದಲ ಒಂದು ತಿಂಗಳು ಉಚಿತ ಸೇವೆಯನ್ನು ಘೋಷಿಸಲಾಗಿದ್ದು ನಂತರದಲ್ಲಿ ವಾರ್ಷಿಕ 1,099 ರೂ. ಶುಲ್ಕವನ್ನು ಭರಿಸಬೇಕಾಗುತ್ತದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ. ಪ್ಲೇಸ್ಟೋರ್ ನಲ್ಲಿರುವ ಹೊಸ ಆಪ್ ಮೂಲಕ ಸೇವೆಯನ್ನು ಪಡೆಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.