ನಾಲ್ಕನೇ ತಲೆಮಾರಿನ 110 ಸಿಸಿ ಆಟೋಮೆಟಿಕ್ ಸ್ಕೂಟರ್ ಆಕ್ಟೀವಾ ವಾಹನವನ್ನು ಹೋಂಡಾ ಮೋಟಾರ್ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಎಚ್ಎಮ್ಎಸ್ಐ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದರ ಬೆಲೆ ರೂ.50,730 (ಎಕ್ಸ್ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ. ಬಿಎಸ್-4 ನಿಬಂಧನೆಗಳಿಗೆ ಅನುಗುಣವಾಗಿ ಆಕ್ಟೀವಾ 4ಜಿಯನ್ನು ತಯಾರಿಸಿರುವುದಾಗಿ ಕಂಪೆನಿ ತಿಳಿಸಿದೆ. ಆಟೋಮೆಟಿಕ್ ಹೆಡ್ ಲ್ಯಾಂಪ್ ಆನ್ ಸೌಲಭ್ಯವನ್ನು ಇದು ಹೊಂದಿದೆ.
ಇದರ ಜತೆಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್, ಇನ್ನಷ್ಟು ಸ್ಟೋರೇಜ್ ಸ್ಪೇಸ್ ವಿಶೇಷತೆಗಳು ಇದರಲ್ಲಿವೆ ಎಂದು ಕಂಪೆನಿ ತಿಳಿಸಿದೆ. ಹೋಂಡಾ ಆಕ್ಟೀವಾ ವಾಹನ ಮಹಿಳೆಯರು ಸೇರಿದಂತೆ ಪುರುಷರು ಅತ್ಯಧಿಕವಾಗಿ ಬಳಸುತ್ತಿರುವ ಅವರ ಮನಗೆದ್ದ ದ್ವಿಚಕ್ರ ವಾಹನ ಎಂಬುದರಲ್ಲಿ ಎರಡು ಮಾತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.