ನವದೆಹಲಿ : ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮಲೇಷ್ಯಾದ ತಾಳೆ ಎಣ್ಣೆ ಆಮದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಲೇಷ್ಯಾ ಪ್ರಧಾನಿ ಮಹಥಿರ್ ಮೊಹಮ್ಮದ್, ಭಾರತ ಕಾಶ್ಮೀರವನ್ನು ದಾಳಿ ಮಾಡಿ ಆಕ್ರಮಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಹೇಳಿಕೆಗೆ ಸರಿಯಾದ ತಿರುಗೇಟು ನೀಡಲು ಮೋದಿ ಸರ್ಕಾರ ಮಲೇಷ್ಯಾ ದೇಶದಿಂದ ತಾಳೆ ಎಣ್ಣೆ ಆಮದಿಗೆ ಶೀಘ್ರದಲ್ಲೇ ನಿರ್ಬಂಧ ಹೇರಲು ಮುಂದಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಮಲೇಷ್ಯಾದಿಂದ ತಾಳೆ ಎಣ್ಣೆ ಖರೀದಿಯಲ್ಲಿ ಅತಿ ದೊಡ್ಡ ಖರೀದಿದಾರ ಎನಿಸಿಕೊಂಡ ಭಾರತ ಸರ್ಕಾರದ ಈ ನಿರ್ಧಾರದಿಂದ ಮಲೇಷ್ಯಾದ ಮಾರಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ ಎನ್ನಲಾಗಿದೆ.