ನವದೆಹಲಿ : ಹಬ್ಬದ ಹರಿದಿನಗಳಂದು ಗ್ರಾಹಕರನ್ನು ಆಕರ್ಷಿಸಲು ಆನ್ ಲೈನ್ ಇ- ಕಾಮರ್ಸ್ ಮಳಿಗೆಯಾದ ಅಮೆಜಾನ್, ಫ್ಲಿಪ್ಕಾರ್ಟ್ ವಿಶೇಷ ಆಫರ್ ಗಳನ್ನು ನೀಡುತ್ತಿತ್ತು. ಆದರೆ ಈ ಬಾರಿ ಇದಕ್ಕೆ ಕತ್ತರಿ ಬೀಳಲಿದೆ ಎನ್ನಲಾಗಿದೆ.
ದಸರಾ, ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವ ಈ ವೇಳೆ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗಾಗಿ ಆರು ದಿನಗಳ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸಲು ಮುಂದಾಗಿದೆ. ಸೆಪ್ಟಂಬರ್ 29 ರಂದು ಈ ಸೇಲ್ ಆರಂಭವಾಗಲಿದೆ. ಹಾಗೇ ಅಮೆಜಾನ್ ಡಿಸ್ಕೌಂಟ್ ಸೇಲ್ ಅನ್ನು ಪ್ರಕಟಿಸಬೇಕಿದೆ.
ಆದರೆ ಇದೀಗ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳು ದೇಶದ ವಿದೇಶಿ ಹೂಡಿಕೆ ನಿಯಮವನ್ನು ಉಲ್ಲಂಘಿಸಿ ಹೆಚ್ಚಿನ ಡಿಸ್ಕೌಂಟ್ ನೀಡುತ್ತಿದೆ ಎಂದು ಅಖಿಲ ಭಾರತ ವ್ಯಾಪಾರ ಒಕ್ಕೂಟ ಸರ್ಕಾರಕ್ಕೆ ದೂರು ನೀಡಿದ್ದು, ಗ್ರಾಹಕರಿಗೆ ನೀಡುವ ಹಬ್ಬದ ಆಫರ್ ಅನ್ನು ನಿಷೇಧಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ.