ಜರ್ಮನಿಯ ಪ್ರಮುಖ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಎಸ್‍ಯುವಿ ವಿಭಾಗದಲ್ಲಿ ಎಕ್ಸ್3, ಎಕ್ಸ್ 5 ವಾಹನಗಳನ್ನು ಭಾರತದ ಮಾರುಕಟ್ಟೆಗೆ ತರುತ್ತಿದೆ. ಇವುಗಳ ಬೆಲೆ ಕ್ರಮಾವಾರು ರೂ. 54.9 ಲಕ್ಷ, ರೂ.73.5 ಲಕ್ಷಗಳು (ಎಕ್ಸ್‌ಶೋರೂಂ ದೆಹಲಿ).
ಚೆನ್ನೈನಲ್ಲಿರುವ ಕಂಪನಿ ಘಟಕದಲ್ಲಿ ಈ ಕಾರುಗಳನ್ನು ತಯಾರಿಸಲಾಗಿದೆ. ಬುಧವಾರದಿಂದ ದೇಶದಾದ್ಯಂತ ಇವು ಪೆಟ್ರೋಲ್, ಡೀಸೆಲ್ ವೇರಿಯಂಟ್‌ಗಳಲ್ಲಿ ಲಭ್ಯವಾಗಲಿವೆ ಎಂದು ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಅಧ್ಯಕ್ಷ ಫ್ರಾಂಕ್ ಓ ತಿಳಿಸಿದ್ದಾರೆ.
ವಿಭಿನ್ನ ಬಳಕೆದಾರ ಅಭಿರುಚಿ ಮೇರೆಗೆ ಆಧುನಿಕ ಟೆಕ್ನಾಲಜಿಯೊಂದಿಗೆ ಪೆಟ್ರೋಲ್, ಡೀಸೆಲ್ ವೇರಿಯಂಟ್‌ನ ಉತ್ಪನ್ನಗಳನ್ನು ತಂದಿರುವುದಾಗಿ ಅವರು ಹೇಳಿದ್ದಾರೆ. ನೂತರ ರೀತಿಯ ಬಿಎಂಡಬ್ಲ್ಯೂ ಇಂಜಿನ್‌ಗಳು ಅತ್ಯಧಿಕ ಶಕ್ತಿಯನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರಯಾಣ ಸುಖಕರವಾಗಿ ಸಾಗಲು ಸಹಕರಿಸುತ್ತವೆ ಎಂದಿದೆ ಕಂಪನಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.