ನಗದು ರಹಿತ ವಹಿವಾಟನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಜಾರಿಗೆ ತಂದ ಭೀಮ್ ಆಪ್ ಜಾಗತಿಕ ದಾಖಲೆ ಸೃಷ್ಟಿಸಿದೆ. ಭೀಮ್ (ಭಾರತ್ ಇಂಟರ್‌ಫೇಸ್ ಫರ್ ಮನಿ) ಅಪ್ಲಿಕೆಷನ್ ಈಗಾಗಲೆ 17 ದಶಲಕ್ಷ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂದು ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ಭೀಮ್ ಆಪ್ ಮೂಲಕ ವಹಿವಾಟು ಸುಲಭವಾಗಿಸಲು ಜನರಿಗೆ ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಆಪ್ ಪರಿಚಯಿಸಲಾಯಿತು. ಐದು ದಶಲಕ್ಷ ಆಂಡ್ರಾಯ್ಡ್ ಗ್ರಾಹಕರು ತಿಂಗಳ ಸಮಯದಲ್ಲಿ ಈ ಆಪನ್ನು ಡೌನ್‍ಲೋಡ್ ಮಾಡಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.