ಈಗಾಗಲೆ ಸಾಲುಸಾಲು ರಜೆಗಳು ಎದುರಾಗಿವೆ. ಫೆ.24ರಂದು ಮಹಾಶಿವರಾತ್ರಿ, ಫೆ.25ರ ಶನಿವಾರ ಮತ್ತು ಫೆ.26ಭಾನುವಾರ ಬ್ಯಾಂಕ್ ರಜೆ. ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರ ಮಾಡಲು ತೊಂದರೆ ಅನುಭವಿಸಲಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ದೇಶದಾದ್ಯಂತ ಇದೇ ಫೆ.28ರಂದು ಮುಷ್ಕರ ಕೈಗೊಳ್ಳಲು ಬ್ಯಾಂಕ್ ಸಂಘಟನೆಗಳು ನಿರ್ಧರಿಸಿವೆ. ಸಾರ್ವಜನಿಕರು ಹಣದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಕೈಬಿಟ್ಟು ಬ್ಯಾಂಕ್ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ ಅಧ್ಯಕ್ಷ ಎಲ್ಲೂರು ವೈ ಸುದರ್ಶನ್ ತಿಳಿಸಿದ್ದಾರೆ. ಕೇಂದ್ರ ಸರಕಾರ ನೌಕರರಿಗೆ ಕೊಟ್ಟಂತೆ ರೂ.20 ಲಕ್ಷ ಗ್ರಾಚ್ಯುಟಿ ಕಾಯಿದೆಗೆ ತಿದ್ದುಪಡಿ ತಂದು ಪೂರ್ವಾನ್ವಯ ಆಗುವಂತೆ ಕಾರ್ಮಿಕರಿಗೆ ರೂ.20 ಲಕ್ಷ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.