ಜರ್ಮನಿ ಮೂಲದ ಅದ್ದೂರಿ ಕಾರು ಬ್ರ್ಯಾಂಡ್ ಆಡಿ ಮಾರಾಟ 2016ನೇ ಸಾಲಿನಲ್ಲಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಡೀಸೆಲ್ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಂದ ತೀವ್ರ ಪೈಪೋಟಿ ಇದ್ದರೂ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಫೋಕ್ಸ್ ವ್ಯಾಗನ್ ಗ್ರೂಪ್ ಲಗ್ಸುರಿ , ಸ್ಫೋರ್ಟ್ಸ್ ಯುಟಿಲಿಟಿ ವಾಹನ ಮಾರಾಟದಲ್ಲಿ ಭಾರಿ ಪ್ರಮಾಣಾಲ್ಲಿ ಏರಿಕೆ ನಮೂದಿಸಿದೆ.
2015ರ 1.80 ದಶಲಕ್ಷ ವಾಹನ ಮಾರಾಟಕ್ಕೆ ಹೋಲಿಸಿದರೆ 2016ರ ಡಿಸೆಂಬರ್‌ನಲ್ಲಿ 1.87 ದಶಲಕ್ಷ ಕಾರುಗಲನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆ ತಿಳಿಸಿದೆ. ಯೂರೋಪಿಯನ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಆಡಿ ಬ್ರಿಟನ್‌ನಲ್ಲಿ ಶೇ.6.4ರಷ್ಟು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೇ.4ರಷ್ಟು ಹೆಚ್ಚಿನ ಮಾರಾಟ ಸಾಧಿಸಿದೆ.
ಆಡಿ ಕಾರಿನ ಪ್ರಮುಖ ಸ್ಪರ್ಧಿಗಳು ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯುಗೆ ಹೋಲಿಸಿದರೆ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನಕ್ಕೆ ಇಳಿದಿದೆ ಎಂದು ನಿಪುಣರು ಊಹಿಸಿದ್ದಾರೆ. ಈ ಕಂಪನಿ ಡೀಸೆಲ್ ಕಾರುಗಳು ವಿವಾದಕ್ಕೆ ಕಾರಣವಾಗಿದ್ದವು. ಈಗ ಮತ್ತೆ ಅಮೆರಿಕದಲ್ಲಿ ಡೀಸೆಲ್ ಕಾರುಗಳ ಉತ್ಪಾದನೆ ಆರಂಭಿಸುವ ಆಲೋಚನೆಯಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.