Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಹಾರಾ ಸಮೂಹದ ರೂ.39,000 ಕೋಟಿ ಆಸ್ತಿ ಮುಟ್ಟುಗೋಲು

ಸಹಾರಾ ಸಮೂಹದ ರೂ.39,000 ಕೋಟಿ ಆಸ್ತಿ ಮುಟ್ಟುಗೋಲು
New Delhi , ಮಂಗಳವಾರ, 7 ಫೆಬ್ರವರಿ 2017 (10:18 IST)
ಸಹಾರಾ-ಸೆಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನವಲಾ, ಮಹಾರಾಷ್ಟ್ರದ ಪುಣೆಯಲ್ಲಿರುವ ಸಹಾರ ಸಮೂಹದ ರೂ. 39,000 ಕೋಟಿ ವೆಚ್ಚದ ಆಸ್ತಿ ಮುಟ್ಟುಗೋಲಿಗೆ ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ. ಜತೆಗೆ ಕಂಪೆನಿ ಮುಖ್ಯಸ್ಥ ಸುಬ್ರತೋ ರಾಯ್‌ಗೆ ನೀಡಿದ್ದ ಪೆರೋಲ್ ಅವಧಿ ವಿಸ್ತರಿಸಿದೆ.
 
ಸಾರ್ವಜನಿಕ ಹರಾಜಿಗಿಡಲು ಸಾಲಕ್ಕೆ ಭದ್ರತೆಯಾಗಿ ಇಟ್ಟಿರುವ ಆಸ್ತಿಗಳನ್ನು ಹೊರತುಪಡಿಸಿದಂತೆ ಹೊಂದಿರುವ ಇತರ ಆಸ್ತಿಗಳ ಪಟ್ಟಿ ಮುಂದಿನ ವಿಚಾರಣೆಯ ವೇಳೆಗೆ  ಸಲ್ಲಿಸುವಂತೆ ನ್ಯಾ.ದೀಪಕ್ ಮಿಶ್ರಾ, ನ್ಯಾ. ರಂಜನ್ ಗೊಗೋಯಿ ಮತ್ತು ನ್ಯಾ. ಎ.ಕೆ. ಸಿಕ್ರಿ ಇದ್ದ ತ್ರಿಿಸದಸ್ಯ ಪೀಠ ಸಹಾರ ಕಂಪೆನಿಗೆ ಆದೇಶಿದೆ. ಅಲ್ಲದೇ ಮುಟ್ಟುಗೋಲಿಗೆ ಆದೇಶಿಸಿರುವ ಕಂಪೆನಿಯ ಆಸ್ತಿ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿರಲಿದ್ದು, ಫೆ.27ರಂದು ನಡೆಯಲಿರುವ ಮುಂದಿನ ವಿಚಾರಣೆವರೆಗೆ ಈ ಆಸ್ತಿಯನ್ನು ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದೆ. 
 
ಭಾರತೀಯ ಭದ್ರತಾ ಮತ್ತು ವಿನಿಮಯ ಆಯೋಗದ(ಸೆಬಿ ರೂ.14,000 ಕೋಟಿ ಸಾಲ ಮರುಪಾವತಿಸಬೇಕಾಗಿದೆ. ಈಗಾಗಲೇ ರೂ.11,000 ಕೋಟಿ ಪಾವತಿಸಲಾಗಿದೆ ಎಂದು ವಿಚಾರಣೆ ವೇಳೆ ಸಹಾರ ಕೋರ್ಟ್‌ನಲ್ಲಿ ಒಪ್ಪಿಕೊಂಡಿತ್ತು. ಕಳೆದ ವರ್ಷ ನ. 28ರಂದು ಪ್ರಕಣದ ವಿಚಾರಣೆ ನಡೆಸಿದ ಕೋರ್ಟ್, ಸುಬ್ರತೋ ರಾಯ್‌ಗೆ ಮಧ್ಯಂತರ ಜಾಮೀನು ನೀಡಿ, ಫೆ.6ರ ಒಳಗಾಗಿ ಸೆಬಿಗೆ ರೂ.600 ಕೋಟಿ ಪಾವತಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಯ್ ಸೋಮವಾರ ರೂ.600 ಕೋಟಿ ಪಾವತಿಸಿದ್ದಾರೆ. ಅಲ್ಲದೇ ಕೋರ್ಟ್ ಒಟ್ಟಾರೆ ಸಾಲ ಮರುಪಾವತಿಗೆ 2019ರವರೆಗೆ ಸಹಾರಕ್ಕೆ ಕಾಲಾವಕಾಶ ನೀಡಿದೆ.
 
ಹೂಡಿಕೆದಾರರಿಗೆ ಶೇ.15ರಷ್ಟು ಬಡ್ಡಿ ದರದಲ್ಲಿ ರೂ.20,000 ಕೋಟಿ ಮರು ಪಾವತಿ ಮಾಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸುವಲ್ಲಿ ಸುಬ್ರತೋ ರಾಯ್ ಒಡೆತನದ ಸಹಾರ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೋರೇಷನ್ ಲಿಮಿಟೆಡ್ ಮತ್ತು ಸಹಾರ ಹೌಸಿಂಗ್ ಫೈನಾನ್‌ಸ್‌ ಕಾರ್ಫೋರೇಷನ್ ಲಿಮಿಟೆಡ್ ವಿಫಲವಾಗಿದೆ ಎಂದು ಸೆಬಿ 2012ರಲ್ಲಿ ಆರೋಪಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಯನ್ಸ್ ಜಿಯೋ ಉಚಿತ ಕೊಡುಗೆ ವಿರುದ್ಧ ದೂರು