ಜಗತ್ತಿನ ಪ್ರತಿಷ್ಠಿತ ಹ್ಯಾಂಡ್ ಸೆಟ್`ಗಳಲ್ಲೊಂದಾದ ಆಪಲ್ ಐಫೋನ್`ಗಳು ಇನ್ಮುಂದೆ ಬೆಂಗಳೂರಲ್ಲೇ ತಯಾರಾಗಲಿವೆ. ಪಲ್ ಐಫೋನ್ ಉತ್ಪಾದನೆಯ ಪ್ರಾಥಮಿಕ ಚಟುವಟಿಕೆಗೆ ಕರ್ನಾಟಕ ಸರ್ಕಾರ ಗುರುವಾರ ಗ್ರೀನ್ ಸಿಗ್ನಲ್ ನೀಡಿದೆ.
ಐಫೋನ್ ಉತ್ಪಾದನೆ ಮಾಡುತ್ತಿರುವ ವಿಶ್ವದ 3ನೇ ರಾಷ್ಟ್ರ ಭಾರತವಾಗಿದ್ದು, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇನ್ನು 3 ತಿಂಗಳೊಳಗೆ ಕಾರ್ಖಾನೆ ಆರಂಭವಾಗಲಿದೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲಕ ಆಪಲ್ ಕಂಪನಿ ತೈವಾನ್ ಕಂಪನಿ ಸಹಕಾರದೊಂದಿಗೆ ಇಲ್ಲಿ ಉದ್ಯಮ ಆರಂಭಿಸಲಿದೆ. ಭಾರತಕ್ಕೆ ಬೇಕಾದಷ್ಟು ಐಫೋನ್`ಗಳನ್ನ ಇಲ್ಲಿಯೇ ಉತ್ಪಾದನೆ ಮಾಡಲಾಗುತ್ತೆ. ಬೆಂಗಳೂರಿನ ಉದ್ಯಮಿ ಸ್ನೇಹಿ ವಾತಾವರಣವನ್ನ ಮೆಚ್ಚಿ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತಾರೆ ಸಚಿವರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ