ಒಂದು ಕೆ.ಜಿ ಒಣ ಮೇವನ್ನು ಪ್ರಸ್ತುತ 3 ರೂಪಾಯಿಗೆ ರೈತರಿಗೆ ಕೊಡಲಾಗುತ್ತದೆ. ಈ ದರವನ್ನು 1.5 ರೂಪಾಯಿಗೆ ಇಳಿಸಿ ಮೇವು ಕೊಡಲು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ನಡೆಯುತ್ತಿರುವ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ಪ್ರತಿ ಕೆ.ಜಿ. ಹುಲ್ಲಿಗೆ 6 /- ರೂಪಾಯಿಗೆ ಪಾವತಿಸಿ ಖರೀದಿಸುತ್ತದೆ. ಆದರೆ ರೈತರ ಅನುಕೂಲಕ್ಕಾಗಿ ಪ್ರಸ್ತುತ 3/-ರೂಪಾಯಿಗೆ ಮೇವು ಬ್ಯಾಂಕ್ ಗಳ ಮೂಲಕ ನೀಡಲಾಗುತ್ತಿದ್ದು, ಈ ದರವನ್ನು ರೂ. 1.5 /- ರೂಪಾಯಿಗೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಿನಿಕಿಟ್: ಇನ್ನೂ ಎರಡು ತಿಂಗಳ ವರೆಗೆ ಮೇವು ಸಾಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ ನಂತರವೂ ಸಮಸ್ಯೆಯಾಗದಂತೆ ಸರ್ಕಾರಿ ಜಮೀನುಗಳಲ್ಲಿ ಹಾಗೂ ಖಾಸಗಿ ಜಮೀನಲ್ಲಿ ಉಚಿತವಾಗಿ ಮಿನಿ ಕಿಟ್ ನೀಡಿ, ಮೇವು ಬೆಳೆಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.