Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ ಮತ್ತೆ ಪ್ರಾರಂಭಿಸಿದ ಅಮೆಜಾನ್

ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ ಮತ್ತೆ ಪ್ರಾರಂಭಿಸಿದ ಅಮೆಜಾನ್
ನವದೆಹಲಿ , ಮಂಗಳವಾರ, 8 ಅಕ್ಟೋಬರ್ 2019 (07:58 IST)
ನವದೆಹಲಿ : ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ್ನು ಮತ್ತೆ ಪ್ರಾರಂಭಿಸಲು ಮುಂದಾಗಿದ್ದು, ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್​  ನೀಡುತ್ತಿದೆ.




ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಿಂದ ಅಕ್ಟೋಬರ್ 4ರವರೆಗೆ ಗ್ರೇಟ್​ ಇಂಡಿಯನ್​ ಫೆಸ್ಟಿವಲ್ ​ ಸೇಲ್​ ನ್ನುನಡೆಸಿದ ಅಮೆಜಾನ್ ಇದೀಗ  ತಿಂಗಳಾಂತ್ಯದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಇದೀಗ ಮತ್ತೆ ಅಕ್ಟೋಬರ್​ 13-17ರವರೆಗೆ ಈ ಸೇಲ್​ ನಡೆಸಲು ನಿರ್ಧಾರ ಮಾಡಿದೆ.


ಈ ಬಾರಿ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಹಾಗೂ ಡೆಬಿಟ್​ ಕಾರ್ಡ್​​ ಬಳಕೆದಾರರಿಗೆ ಹೆಚ್ಚುವರಿ ರಿಯಾಯತಿ ಸಿಗಲಿದೆ. ಡೆಬಿಟ್​ ಕಾರ್ಡ್​ಗಳ ಮೇಲೆ ಯಾವುದೇ ಇಎಂಐ ಇರುವುದಿಲ್ಲ. ಪ್ರೈಮ್​ ಸದಸ್ಯರಿಗೆ ಅಕ್ಟೋಬರ್​ 12ರಿಂದಲೇ ಸೇಲ್​ ಆರಂಭಗೊಳ್ಳಲಿದೆ. ಒನ್​ಪ್ಲಸ್​ 7ಟಿ, ಸ್ಯಾಮ್​ಸಂಗ್​ ಎಂ30ಎಸ್​​ ಮತ್ತು ವಿವೋ ಯು10 ಸೇರಿ ಅನೇಕ ಮೊಬೈಲ್ ​ಗಳ ಮೇಲೆ ಶೇ.40, ಟಿವಿ ಹಾಗೂ ಮನೆ ಬಳಕೆ ವಸ್ತುಗಳ ಬೆಲೆ ಮೇಲೆ ಶೇ.60 ರಿಯಾಯಿತಿ ಸಿಗಲಿದೆ. ಇದರ ಜೊತೆಗೆ ಇನ್ನೂ ಹಲವು ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್​ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಕುಳಿತು ಹಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ