ಆಪಲ್ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ತಾಂತ್ರಿಕತೆಯನ್ನು ಕೊಡುವುದರಲ್ಲಿ ಸದಾ ಮುಂದಿದೆ. ಈ ಸಲ ವೈರ್‌ಲೆಸ್ ಇಯರ್‌ಫೋನ್ ಏರ್‌ಪಾಡ್ಸ್ ಹೊರತಂದಿದ್ದು ಗೊತ್ತೇ ಇದೆ. ಐಫೋನ್ 7, 7ಪ್ಲಸ್ ಮಾಡೆಲ್‌ಗಳಿಗೆ 3.5 ಎಂ.ಎಂ ಜಾಕ್ ಬದಲಾಗಿ ಆಪಲ್ ಏರ್‌ಪಾಡ್ಸನ್ನು ಬಿಡುಗಡೆ ಮಾಡಿತ್ತು.
ಆದರೆ ಈ ಏರ್‌ಪಾಡ್ಸಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಕೆಲವು ಮಂದಿ ಗ್ರಾಹಕರು ಈ ಬಗ್ಗೆ ದೂರು ನೀಡುತ್ತಿದ್ದಾರೆ. ಏರ್‌ಪಾಡ್ಸ್ ಜೊತೆಗೆ ಕೊಟ್ಟಂತ ಕೇಸ್‌ನಲ್ಲಿ ಇಯರ್‌ಫೋನನ್ನು ಇಟ್ಟು ಚಾರ್ಚ್ ಮಾಡಿಕೊಳ್ಳಬೇಕಾಗುತ್ತದೆ. 4-5 ಗಂಟೆಗಳ ಕಾಲ ಚಾರ್ಚ್ ಮಾಡಿದರೆ ಸುಮಾರು 24 ಗಂಟೆಗಳ ಕಾಲ ಕೇಸ್ ಕೆಲಸ ಮಾಡುತ್ತದೆ ಎಂದು ಆಪಲ್ ಕಂಪನಿ ಹೇಳಿತ್ತು.
ಆದರೆ ಈ ಬಗ್ಗೆ ಗ್ರಾಹಕರು ಅಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಉಪಯೋಗಿಸದೆ ಸ್ಟ್ಯಾಂಡ್‍ಬೈ ಸಮಯದಲ್ಲೇ ಏರ್‌ಪಾಡ್ಸ್ ಕೇಸ್ ಬ್ಯಾಟರಿ ಖರ್ಚಾಗುತ್ತಿದೆ ಎನ್ನುತ್ತಿದ್ದಾರೆ. ಸಮಸ್ಯೆ ಇರುವ ಏರ್‌ಪಾಡ್‌ಗಳನ್ನು ಬದಲಾಯಿಸಿಕೊಡುತ್ತಿದೆ ಕಂಪನಿ. ಆದರೆ ತಯಾರಿಕೆಯಲ್ಲೇ ಲೋಪ ಇದೆ ಎಂದು, ಚಿಪ್‌ಸೆಟ್ ಬಳಿ ಗುಣಮಟ್ಟದ ಸೋಲ್ಡರಿಂಗ್ ಮಾಡದೆ ಇರುವುದಕ್ಕೇ ಈ ಸಮಸ್ಯೆ ಎಂದು ಟೆಕ್ ನಿಪುಣರು ಹೇಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.