ಮುಂಬೈ: ರಿಲಯನ್ಸ್ ಸಂಸ್ಥೆ ಜಿಯೋ ಸಿಮ್ ಕಾರ್ಡ್ ದೇಶದ ಟೆಲಿಕಾಂ ಸಂಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿತು. ಇದೀಗ ರಿಲಯನ್ಸ್ ಜಿಯೋ ಡಿಟಿಎಚ್ ಸೇವೆ ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಆಫರ್ ಕೊಟ್ಟು ಗ್ರಾಹಕರಿಗೆ ಭಾರೀ ಲಾಭ ತಂದುಕೊಟ್ಟ ರಿಲಯನ್ಸ್ ಸಂಸ್ಥೆ ಇದೀಗ ಕಡಿಮೆ ಬೆಲೆಯಲ್ಲಿ ಡಿಟಿಎಚ್ ಸೇವೆ ಒದಗಿಸಲು ಸಜ್ಜಾಗಿದೆ. ಪ್ರತೀ ತಿಂಗಳಿಗೆ 180 ರೂ. ಗಳಿಗೆ ಡಿಟಿಎಚ್ ಸೇವೆ ಒದಗಿಸಲು ಯೋಜನೆ ರೂಪಿಸಿದೆ.
ಆಂಡ್ರಾಯ್ಡ್ ಸೆಟ್ ಬ್ಯಾಕ್ಸ್ ಅಥವಾ ಆಪಲ್ ಸೆಟ್ ಬ್ಯಾಕ್ಸ್ ಬಳಸಿ ರಿಲಯನ್ಸ್ ಜಿಯೋ ಡಿಟಿಎಚ್ ಸೇವೆ ಪಡೆಯಬಹುದಾಗಿದೆ. ಕೇವಲ 180 ರೂ. ಪಾವತಿಸಿ ಗರಿಷ್ಠ ಚಾನೆಲ್ ವೀಕ್ಷಿಸುವ ಯೋಜನೆಯೊಂದಕ್ಕೆ ಇದೇ ತಿಂಗಳು ಚಾಲನೆ ಸಿಗುವ ಸಾಧ್ಯತೆಯಿದೆ. 300 ಟಿವಿ ಚಾನೆಲ್ 50 ಎಚ್ ಡಿ ಚಾನೆಗಳನ್ನು ಮೊದಲ 90 ದಿನಗಳ ಉಚಿತ ಸೇವೆಯೊಂದಿಗೆ ಪಡೆಯಬಹುದಾಗಿದೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ