Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದಲ್ಲಿ ಸಖತ್ ಜೋರಾಗಿದೆ 4ಜಿ ಹವಾ

ಭಾರತದಲ್ಲಿ ಸಖತ್ ಜೋರಾಗಿದೆ 4ಜಿ ಹವಾ
New Delhi , ಗುರುವಾರ, 29 ಡಿಸೆಂಬರ್ 2016 (09:36 IST)
ಸ್ಮಾರ್ಟ್‍ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವವರ ಬಾಯಲ್ಲಿ ಈಗ ಕೇಳಿಬರುತ್ತಿರುವ ಹೆಸರು 4ಜಿ. ಮುಖ್ಯವಾಗಿ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಅಡಿಯಿಟ್ಟ ಮೇಲೆ ಭಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಉಚಿತ ಡಾಟಾ, ಕರೆಗಳು ಸೌಲಭ್ಯವನ್ನು 4ಜಿ ನೆಟ್‍ವರ್ಕ್‍ನಿಂದ ಪಡೆಯಬಹುದೆಂದು ಗೊತ್ತಾಗುತ್ತಿದ್ದಂತೆ ಉಳಿದ ಆಪರೇಟರ್‌ಗಳು ಕೊಡುಗೆಗಳನ್ನು ಪ್ರಕಟಿಸಲು ಆರಂಭಿಸಿದ್ದು ಗೊತ್ತೇ ಇದೆ.
 
ಇದರ ಪ್ರಭಾವ ಸ್ಮಾರ್ಟ್‌ಫೋನ್‌ಗಳ ಮೇಲೂ ಉಂಟಾಗಿದೆ. ಇಷ್ಟು ದಿನ 2ಜಿ, 3ಜಿ ಫೋನ್‌ಗಳನ್ನು ಬಳಸುತ್ತಿದ್ದವರೂ ಸಹ ಈಗ ಹೊಸ 4ಜಿ ಫೋನ್‌ಗೆ ಬದಲಾಗಿದ್ದಾರೆ. ಕಂಪನಿಗಳು ಕೊಡುತ್ತಿರುವ ಆಫರ್, ಬಜೆಟ್‌ಗೆ ತಕ್ಕಂತೆ ಗ್ರಾಹಕರು 4ಜಿ ಸೆಟ್‍ಗಳಿಗೆ ಮುಗಿಬಿದ್ದಿದ್ದಾರೆ. 
 
ಮಾರಾಟ ಆಫ್‍ಲೈನ್‍ಗಿಂತಲೂ ಆಲ್‌ಲೈನ್‌ನಲ್ಲಿ ಜೋರಾಗಿದೆ. ನಮ್ಮ ದೇಶದಲ್ಲಿ ಶೇ.53ರಷ್ಟು ಮಂದಿ ಆನ್‌ಲೈನ್‍ನಲ್ಲಿ ಸ್ಮಾರ್ಟ್‍ಫೋನ್ ಕೊಂಡುಕೊಂಡರೆ ಉಳಿದ ಶೇ.39ರಷ್ಟು ಮಂದಿ ಆಫ್‌ಲೈನ್‍ಗೆ ಮೊರೆ ಹೋಗಿದ್ದಾರೆ ಎಂದು ಡೆಲಾಯಿಟ್ ಸಮೀಕ್ಷೆ ಹೇಳುತ್ತದೆ. 
 
ಮೊಬೈಲ್ ಬಳಕೆದಾರರ ಸಮೀಕ್ಷೆ 2016ರ ಪ್ರಕಾರ, ಭವಿಷ್ಯದಲ್ಲಿ 4ಜಿ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ 12 ತಿಂಗಳಲ್ಲಿ ಸುಮಾರು ಶೇ.45ರಷ್ಟು ಮಂದಿ 4ಜಿ ಅಥವಾ ಎಲ್‌ಟಿಇ ತಾಂತ್ರಿಕತೆಗೆ ಬದಲಾಗಲು ಬಳಕೆದಾರರು ಆಸಕ್ತಿ ತೋರಿಸುತ್ತಿದ್ದಾರಂತೆ. ಇಂಟರ್‌ನೆಟ್ ಬೆಲೆಗಳು ಕಡಿಮೆಯಾಗುತ್ತಿರುವುದು, ಡಾಟಾ ಬಳಕೆ ಹೆಚ್ಚುತ್ತಿರುವುದು, ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಿದೆ ಎಂದು ಡೆಲಾಯಿಟ್ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೀಚಾರ್ಜ್ ಜತೆ ಕೈಜೋಡಿಸಿದ ಫಾಸೋಸ್