ನೋಟು ಅಮಾನ್ಯ ಬಳಿಕ ದೇಶಾದ್ಯಂತ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಉದ್ಭವಿಸಿದ್ದು, ಈಗಲೂ ಜನ ಇದರಿಂದ ಹೊರಬಂದಿಲ್ಲ. ಹೀಗಾಗಿ, ಆರ್`ಬಿಐ ಮುಂದಿನ ತಿಂಗಳಿಂದ 200 ರೂ. ನೋಟುಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ ಎನ್ನುತ್ತಿವೆ ವರದಿಗಳು.
ಹೌದು, ಈಗಾಗಲೇ 200 ರೂ. ನೋಟು ಮುದ್ರಣ ಮಾರ್ಚ್`ನಿಂದಲೇ ಆರಂಭವಾಗಿದೆ ಎನ್ನಲಾಗಿದ್ದು, ಮುಂದಿನ 30 ದಿನಗಳಲ್ಲಿ 200 ರೂಪಾಯಿ ನೋಟು ಚಲಾವಣೆಗೆ ಬರುತ್ತದೆ ಎಂದು ಮಾಧ್ಯಮಗಳು ಆರ್`ಬಿಐ ಮೂಲಗಳನ್ನುದ್ದೇಶಿಸಿ ವರದಿ ಮಾಡಿವೆ. 200 ರೂ. ಚಲಾವಣೆ ಬಳಿಕ ಕ್ರಮೇಣವಾಗಿ 2000 ರೂ. ನೋಟುಗಳನ್ನ ಆರ್`ಬಿಐ ಹಿಂಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ನಕಲಿ ನೋಟುಗಳನ್ನ ಗುರ್ತಿಸಿ ತಡೆಗಟ್ಟಲು 12 ನೋಟು ಕೇಂದ್ರಗಳನ್ನ ತೆರೆಯಲು ಸಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡತೆ ಆದರೆ ಮುಂದಿನ ತಿಂಗಳು ಗರಿಗರಿ 200 ರೂ. ನೋಟು ಜನರ ಕೈಸೇರಲಿದೆ. ಬಳಿಕ ಸಾರ್ವಜನಿಕರ ಹಣಕಾಸು ವಹಿವಾಟು ಸಹಜ ಸ್ಥಿತಿಗೆ ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ