Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೆನ್ನೈನಲ್ಲಿ ಎರಡನೇ ಕ್ವಾಲಿಫೈಯರ್‌: ಟಾಸ್‌ ಗೆದ್ದ ರಾಜಸ್ಥಾನ ತಂಡ ಬೌಲಿಂಗ್‌ ಆಯ್ಕೆ

ಚೆನ್ನೈನಲ್ಲಿ ಎರಡನೇ ಕ್ವಾಲಿಫೈಯರ್‌: ಟಾಸ್‌ ಗೆದ್ದ ರಾಜಸ್ಥಾನ ತಂಡ ಬೌಲಿಂಗ್‌ ಆಯ್ಕೆ

sampriya

, ಶುಕ್ರವಾರ, 24 ಮೇ 2024 (19:08 IST)
Photo By X
ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ರಸ್ತುತ ಆವೃತ್ತಿಯ ಎರಡನೇ ಕ್ವಾಲಿಫೈಯರ್‌ ಇಂದು ಚೆನ್ನೈನಲ್ಲಿ ನಡೆಯುತ್ತಿದೆ. ಟಾಸ್‌ ಗೆದ್ದ  ರಾಜಸ್ಥಾನ ರಾಯಲ್ಸ್‌ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಲಿದೆ.

ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಸೋತ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದ ರಾಜಸ್ಥಾನ ರಾಯಲ್ಸ್‌ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಭಾನುವಾರ ಫೈನಲ್‌ನಲ್ಲಿ ಕೋಲ್ಕತ್ತ ತಂಡವನ್ನು ಎದುರಲಿಸಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ ಇಂದಿನ ಪಂದ್ಯದಲ್ಲಿ ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ. ಮೇ 2ರಂದು ಹೈದರಾಬಾದಿನಲ್ಲಿ ಇವೆರಡು ತಂಡಗಳು ಲೀಗ್‌ ಹಂತದಲ್ಲಿ ಮುಖಾಮುಖಿ ಆದಾಗ ಸನ್‌ರೈಸರ್ಸ್ ಒಂದು ರನ್‌ನಿಂದ ಜಯಗಳಿಸಿತ್ತು.

ರಾಜಸ್ಥಾನ್‌ ರಾಯಲ್ಸ್​ 2008ರಲ್ಲಿ ಚಾಂಪಿಯನ್ ಆಗಿತ್ತು. 2022ರಲ್ಲಿ ರನ್ನರ್​ಅಪ್ ಆಗಿತ್ತು. ಅತ್ತ 2016ರಲ್ಲಿ‌ ಆರ್‌ಸಿಬಿ ಮಣಿಸಿ ಟ್ರೋಫಿ ಗೆದ್ದಿದ್ದ ಹೈದರಾಬಾದ್‌ ತಂಡವು 2018ರಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿತ್ತು. ಹಾಗಾಗಿ, ಈ ಎರಡರಲ್ಲಿ ಗೆದ್ದ ತಂಡವು ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದಂತಾಗುತ್ತದೆ.

ಹೈದರಾಬಾದ್‌ ಸಂಭಾವ್ಯ​ ಆಟಗಾರರು: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ , ಏಡೆನ್ ಮಾರ್ಕ್ರಮ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ಕ್ಯಾಪ್ಟನ್ 9 ), ಭುವನೇಶ್ವರ್ ಕುಮಾರ್, ಟಿ ನಟರಾಜನ್ (ಇಂಪ್ಯಾಕ್ಟ್ ಪ್ಲೇಯರ್- ಮಯಾಂಕ್ ಮಾರ್ಕಾಂಡೆ).

ರಾಜಸ್ಥಾನ ಸಂಭವ್ಯ ಆಟಗಾರರು: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ಕ್ಯಾಪ್ಟನ್ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ. (ಇಂಪ್ಯಾಕ್ಟ್ ಪ್ಲೇಯರ್- ಯಜುವೇಂದ್ರ ಚಾಹಲ್)

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್‌ ಶಿಶು ಅಮೆರಿಕಕ್ಕೆ ಐತಿಹಾಸಿಕ ಸರಣಿ ಜಯ: ಅನುಭವಿ ಬಾಂಗ್ಲಾ ತಂಡಕ್ಕೆ ಭಾರೀ ಮುಖಭಂಗ