ದುಬೈ: ಸೋಮವಾರ ನಡೆಯಲಿರುವ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ತೊಡುವ ನೀಲಿ ಸಮವಸ್ತ್ರ ಹರಾಜಾಗಲಿದೆ.
ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆರ್ ಸಿಬಿ ಈಪಂದ್ಯದಲ್ಲಿ ನೀಲಿ ಸಮವಸ್ತ್ರ ಧರಿಸಿ ಆಡಲಿದೆ. ಈ ಸಮವಸ್ತ್ರಗಳನ್ನು ಬಳಿಕ ಹರಾಜಿಗೆ ಹಾಕಲಾಗುತ್ತದೆ.
ಇದರಿಂದ ಸಂಗ್ರಹವಾಗುವ ಹಣವನ್ನು ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಕಾರ್ಯಕ್ಕೆ ನೆರವಾಗಲು ನೀಡಲಾಗುವುದು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.