ದುಬೈ: ಐಪಿಎಲ್ 14 ರಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಯಾತ್ರೆ ಲೀಗ್ ಹಂತದಲ್ಲೇ ಸಮಾಪ್ತಿಯಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್ ಗಳಿಂದ ಗೆದ್ದರೂ ಮುಂಬೈಗೆ ಪ್ಲೇ ಆಫ್ ಗೇರಲು ಸಾಧ‍್ಯವಾಗಿಲ್ಲ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಈ ಬೃಹತ್ ಮೊತ್ತಕ್ಕೆ ಕಾರಣರಾದವರು ಇಶಾನ್ ಕಿಶನ್. ಕೇವಲ 32 ಎಸೆತಗಳಿಂದ 11 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 84 ರನ್ ಸಿಡಿಸಿದ ಇಶಾನ್ ವಿಶ್ವಕಪ್ ಗೆ ಮೊದಲು ಭರ್ಜರಿ ಫಾರ್ಮ್ ಗೆ ಮರಳಿದ್ದಾರೆ. ಇವಿರಗೆ ಉತ್ತಮ ಸಾಥ್ ನೀಡಿದ ಸೂರ್ಯ ಕುಮಾರ್ ಯಾದವ್ 40 ಎಸೆತಗಳಲ್ಲಿ 82 ರನ್ ಗಳಿಸಿದರು.
ಈ ಬೃಹತ್ ಮೊತ್ತ ಬೆನ್ನತ್ತಿದ ಹೈದರಾಬಾದ್ ಗೆ ಅಗ್ರ ಮೂರು ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಆಸರೆಯಾದರು. ಜೇಸನ್ ರಾಯ್ 34, ಅಭಿಷೇಕ್ ಶರ್ಮಾ 33, ಮನೀಶ್ ಪಾಂಡೆ 69 ರನ್ ಗಳಿಸಿದರು. ಆದರೆ ಉಳಿದವರಿಂದ ತಕ್ಕ ಆಟಬರಲಿಲ್ಲ. ಇದರಿಂದಾಗಿ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು. ನಿನ್ನೆ ಹೈದರಾಬಾದ್ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದ್ದರು.