ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ಮುಂಚಿತವಾಗಿ ಬಂದಿಳಿದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ಆಟಗಾರರು ನೆಟ್ ಪ್ರಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ.
ದುಬೈಗೆ ಬಂದ ಆರು ದಿನಗಳಲ್ಲಿ ಮೂರು ಬಾರಿ ಕೊರೋನಾ ಪರೀಕ್ಷೆಗೊಳಗಾದ ಆಟಗಾರರು ನಿನ್ನೆ ಸಂಜೆಯಿಂದ ಹೊರಗಡೆ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಆದರೆ ತಡವಾಗಿ ತಂಡವನ್ನು ಕೂಡಿಕೊಂಡ ಆಟಗಾರರು ಇನ್ನೂ ಕ್ವಾರಂಟೈನ್ ಅವಧಿ ಮುಗಿಸದ ಕಾರಣ ನೆಟ್ ಪ್ರಾಕ್ಟೀಸ್ ಗಿಳಿದಿಲ್ಲ. ಬಿಸಿಸಿಐ ನಿಯಮದ ಪ್ರಕಾರ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಅವಧಿ ಮತ್ತು ಮೂರು ಬಾರಿ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಮಾತ್ರ ಅಭ್ಯಾಸಕ್ಕೆ ಹಾಜರಾಗಬಹುದಾಗಿದೆ.