ಮುಂಬೈ: ಕೊರೋನಾ ನಡುವೆಯೂ ಐಪಿಎಲ್ 13 ಆಯೋಜಿಸುತ್ತಿರುವುದು ಯಾರಿಗೆ ಲಾಭ ತಂದಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ನೆಟ್ ಬೌಲರ್ ಗಳಿಗೆ ಮಾತ್ರ ಭಾಗ್ಯದ ಬಾಗಿಲು ತೆರೆಯಲಿದೆ.
ಸಾಮಾನ್ಯವಾಗಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ಸ್ಥಳೀಯ ಬೌಲರ್ ಗಳನ್ನೇ ಬಳಸಲಾಗುತ್ತದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ನೆಟ್ ಬೌಲರ್ ಗಳೂ ಬಯೋ ಸೆಕ್ಯೂರ್ ವಾತಾವರಣದಲ್ಲಿ ಕಳೆಯಬೇಕಾಗಿದೆ.
ಹೀಗಾಗಿ ಚೆನ್ನೈ, ಡೆಲ್ಲಿ, ಕೋಲ್ಕೊತ್ತಾ ನೈಟ್ ರೈಡರ್ಸ್ ಮುಂತಾದ ತಂಡಗಳು ತಮ್ಮ ಜತೆಗೆ ನೆಟ್ ಬೌಲರ್ ಗಳನ್ನೂ ಕರೆದೊಯ್ಯಲಿದ್ದಾರೆ. ಇದರಿಂದಾಗಿ ಸುಮಾರು 50 ಸ್ಥಳೀಯ, ಯುವ ಪ್ರತಿಭೆಗಳಿಗೆ ಘಟಾನುಘಟಿ ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿದೆ.