ಮುಂಬೈ: ಕೊರೋನಾ ನಡುವೆ ಐಪಿಎಲ್ 13 ಆಯೋಜಿಸಲು ಹೊರಟಿರುವ ಆಯೋಜಕರಿಗೆ ಈಗ ಕ್ರಿಕೆಟಿಗರ ಪತ್ನಿ, ಮಕ್ಕಳದ್ದೇ ದೊಡ್ಡ ಚಿಂತೆಯಾಗಿದೆ.
ಕೊರೋನಾದಿಂದ ಆಟಗಾರರನ್ನು ರಕ್ಷಿಸುವುದೇ ದೊಡ್ಡ ಸವಾಲು. ಅಂತಹದ್ದರಲ್ಲಿ ಪತ್ನಿ, ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡುವುದಾ ಬೇಡವಾ ಎಂಬುದೇ ಐಪಿಎಲ್ ಆಡಳಿತ ಮಂಡಳಿಗಿರುವ ದೊಡ್ಡ ತಲೆನೋವು.
ಒಂದು ವೇಳೆ ಆಟಗಾರರಿಗೆ ಕುಟುಂಬದವರನ್ನು ಕರೆದೊಯ್ಯಲು ಅವಕಾಶ ನೀಡದೇ ಇದ್ದರೂ ತಪ್ಪಾಗುತ್ತದೆ. ಯಾಕೆಂದರೆ ಐಪಿಎಲ್ ಬರೋಬ್ಬರಿ 2 ತಿಂಗಳು ನಡೆಯುತ್ತದೆ. ಇಷ್ಟು ದಿನ ಅವರ ಕುಟುಂಬದವರ ಭೇಟಿಗೆ ಅವಕಾಶ ನೀಡದೇ ಇರುವುದೂ ಅಪರಾಧ. ಹೀಗಾಗಿ ಫ್ರಾಂಚೈಸಿಗಳು ಈಗ ಯುಎಇಗೆ ತಮ್ಮದೇ ತಂಡವನ್ನು ಕಳುಹಿಸಿ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಲು ತೀರ್ಮಾನಿಸಿದ್ದಾರೆ.