ಐಪಿಎಲ್ ಆರಂಭದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 35 ರನ್`ಗಳ ಸೋಲನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ. ಕೊಹ್ಲಿ, ಡಿವಿಲಿಯರ್ಸ್`ರಂತಹ ಘಟಾನುಘಟಿ ಆಟಗಾರರ ಅನುಪಸ್ಥಿತಿ ತಂಡವನ್ನ ಇನ್ನಿಲ್ಲದಂತೆ ಕಾಡಿತ್ತು. ಪ್ರತಿಭಾವಂತ ಯುವ ಆಟಗಾರರಿದ್ದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ.
ಟರ್ನಿಂಗ್ ಪಾಯಿಂಟ್:
ರಶೀದ್ ಧಮಾಕಾ: ಐಪಿಎಲ್`ಗೆ ಪಾದಾರ್ಪಣೆ ಮಾಡಿದ ಆಫ್ಘಾನಿಸ್ತಾನದ ರಶೀದ್ ಖಾನ್, ಆರಂಭಿಕ ಮಂದೀಪ್ ಸಿಂಗ್ ವಿಕೆಟ್ ಉರುಳಿಸಿದ್ದು, ಆಟದ ಟರ್ನಿಂಗ್ ಪಾಯಿಂಟ್. 208 ರನ್`ಗಳ ಬೃಹತ್ ಗುರಿ ಬೆನ್ನತ್ತಿದ ಆರ್`ಸಿಬಿಗೆ ಗೇಲ್ ಮತ್ತು ಮಂದೀಪ್ ಉತ್ತಮ ಆರಂಭವನ್ನೇ ಒದ್ದಗಿಸಿದ್ದರು. 6 ಓವರ್`ಗೆ 56 ರನ್ ಗಳಿಸಿ ಸುಸ್ಥಿಯಲ್ಲಿದ್ದಾಗ ಬೌಲಿಂಗ್ ದಾಳಿಗಿಳಿದ ರಶೀದ್, ಮಂದೀಪ್ ಅವರನ್ನ ಗೂಗ್ಲಿ ಬಲೆಗೆ ಕೆಡವಿ ಬೌಲ್ಡ್ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಸಹ ಔಟ್ ಮಾಡಿ ಆರ್`ಸಿಬಿಗೆ ಆಘಾತ ನೀಡಿದರು.
ಬೆನ್ ಕಟಿಂಗ್ಸ್ ಸೂಪರ್ ಥ್ರೋ: ವಿಕೆಟ್ ಉರುಳುತ್ತಿದ್ದರೂ ಹೈದ್ರಾಬಾದ್ ಬೌಲರ್`ಗಳ ಬೆವರಿಳಿಸುತ್ತಿದ್ದ ಆಲ್ರೌಂಡರ್ ಕೇದಾರ್ ಜಾಧವ್ ರನೌಟ್ ತಂಡಕ್ಕೆ ಮರ್ಮಾಘಾತ ನೀಡಿತು. ಬೆನ್ ಕಟಿಂಗ್ಸ್ ಬೌಂಡರಿ ಲೈನ್ ಬಳಿಯಿಂದ ಎಸೆದ ಸೂಪರ್ ಥ್ರೋ ಜಾಧವ್ ಕ್ರೀಸ್ ಮುಟ್ಟುವ ಮೊದಲೇ ಬೇಲ್ಸ್ ಎಗರಿಸಿತ್ತು.
ಯುವಿ ಕ್ಯಾಚ್ ಬಿಟ್ಟ ಅರವಿಂದ್: ಚೌಧರಿ ಬೌಲಿಂಗ್`ನಲ್ಲಿ ಯುವಿ ನಿಡಿದ ಕ್ಯಚನ್ನ ಅರವಿಂದ್ ಡ್ರಾಪ್ ಮಾಡಿದ್ದು, ತಂಡಕ್ಕೆ ದುಬಾರಿಯಾಯ್ತು. 27 ಎಸೆತಗಳಲ್ಲಿ 62 ರನ್ ಸಿಡಿಸಿದ ಯುವಿ ತಂಡದ ಸ್ಕೋರ್ 200ರಗಡಿ ದಾಟಲು ನೆರವಾದರು.
ಕಾಡಿದ ಹಿರಿಯ ಆಟಗಾರರು ಅನುಪಸ್ಥಿತಿ: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ೆ ತಕ್ಕ ಮೇಲೆ ಬಹುವಾಗಿ ಅವಲಂಬಿಸಿದ್ದು, ಅವರಿಲ್ಲದೆ ಆಡುವುದು ಕಷ್ಟ ಎನ್ನುವಂತಾಗಿದೆ. ಕೆಳ ಕ್ರಮಾಂಕದ ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿಲ್ಲ. ಶೇನ್ ವ್ಯಾಟ್ಸನ್ ಸಹ ತಂಡವನ್ನ ಗೆಲುವಿಮ ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಕುಸಿದ ಕ್ರಿಸ್ ಗೇಲ್: ಕ್ರಿಸ್ ಗೇಲ್ ಆಟದಲ್ಲಿ ಹಿಂದಿನ ಖದರ್ ಕಾಣುತ್ತಿಲ್ಲ. ಮೊದ ಮೊದಲು ಒಂದೆರಡು ಬಿಗ್ ಶಾಟ್ ಸಿಡಿಸುವ ಗೇಲ್ ತಂಡವನ್ನ ಗೆಲುವಿನತ್ತ ಕೊಂಡೊಯ್ಯುತ್ತಿಲ್ಲ. ಒಂದೆರಡು ವಿಕೆಟ್ ಉರುಳಿದರೆ ಸಾಕು ಪ್ಯಾನಿಕ್`ಗೆ ಒಳಗಾಗುವ ಗೇಲ್ ಆತುರಾತುರವಾಗಿ ಆಡಿ ವಿಕೆಟ್ ಒಪ್ಪಿಸುತ್ತಾರೆ. ನಿನ್ನೆ ನಡೆದಿದ್ದು ಸಹ ಅದೇ. ಕ್ರೀಸ್`ಗೆ ಕಚ್ಚಿ ನಿಂತು ಇನ್ನಿಂಗ್ಸ್ ಕಟ್ಟುವ ತಾಳ್ಮೆ ತೋರುತ್ತಿಲ್ಲ.