ಹೈದರಾಬಾದ್: ಟಿ20 ಕ್ರಿಕೆಟ್ ಎಂದರೆ ರೋಚಕತೆಗೆ ಇನ್ನೊಂದು ಹೆಸರು. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯ ಅದನ್ನು ನಿಜ ಮಾಡಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಟಿ20 ಕ್ರಿಕೆಟ್ ನಲ್ಲಿ ಇದು ದೊಡ್ಡ ಮೊತ್ತವೇನೂ ಅಲ್ಲ. ಹೀಗಾಗಿ ಚೆನ್ನೈ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು.
ಆದರೆ ಮುಂಬೈ ಅಷ್ಟು ಸುಲಭಕ್ಕೆ ಗೆಲುವು ಬಿಟ್ಟುಕೊಡಲಿಲ್ಲ. ಚೆನ್ನೈ ವಿಕೆಟ್ ಗಳನ್ನು ನಿರಂತರವಾಗಿ ಕಿತ್ತು ಪಂದ್ಯದ ರೋಚಕತೆ ಹೆಚ್ಚಿಸಿದರು. ಅದರಲ್ಲೂ ಮುಂಬೈ ಫೀಲ್ಡಿಂಗ್ ಉತ್ತಮವಾಗಿತ್ತು. ಧೋನಿ ಕೂಡಾ 1 ರನ್ ಗೆ ರನೌಟ್ ಆಗಿ ಪೆವಿಲಿಯನ್ ಸೇರಿದಾಗ ಚೆನ್ನೈಗೆ ಸೋಲಿನ ಭೀತಿ ಆವರಿಸಿತ್ತು.ಆದರೆ ಶೇನ್ ವ್ಯಾಟ್ಸನ್ 59 ಎಸೆತಗಳಲ್ಲಿ 80 ರನ್ ಗಳಿಸಿ ಆಸೆ ಚಿಗುರಿಸಿದ್ದರು. ಹಾಗಿದ್ದರೂ ಅಂತಿಮವಾಗಿ ಮುಂಬೈ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಂದ ಗೆದ್ದು ಐಪಿಎಲ್ ಚಾಂಪಿಯನ್ ಆಯಿತು. ಚೆನ್ನೈ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ