ಮುಂಬೈ: ಮಾಲಿಕ ನೆಸ್ ವಾಡಿಯಾ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾರಣ, ಕಿಂಗ್ಸ್ ಇಲೆವೆನ್ ಪಂಜಾಬ್ ಮುಂದಿನ ಐಪಿಎಲ್ ಗೆ ನಿಷೇಧದ ಭೀತಿಯಲ್ಲಿದೆ.
ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡದ ಮಾಲಿಕ, ಆಟಗಾರರು ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಕೊಂಡರೆ ಆ ತಂಡವೇ ನಿಷೇಧದವರೆಗಿನ ಶಿಕ್ಷೆಗೊಳಗಾಗಬೇಕಾಗುತ್ತದೆ. ಹೀಗಾಗಿ ಪಂಜಾಬ್ ಕೂಡಾ ಭೀತಿಯಲ್ಲಿದೆ.
ಒಂದು ವೇಳೆ ಪಂಜಾಬ್ ಮುಂದಿನ ವರ್ಷಕ್ಕೆ ನಿಷೇಧಕ್ಕೊಳಗಾದರೆ ಆರ್ ಸಿಬಿಗೆ ಲಾಭವಾಗಬಹುದು. ಆರ್ ಸಿಬಿಯಿಂದ ಪಂಜಾಬ್ ಪಾಳಯ ಸೇರಿಕೊಂಡಿರುವ ಕ್ರಿಸ್ ಗೇಲ್, ಕೆಎಲ್ ರಾಹುಲ್ ಮತ್ತೆ ಮರಳಿ ಗೂಡಿಗೆ ಬರಬಹುದು. ಇವರಿಬ್ಬರೂ ಸ್ಟಾರ್ ಆಟಗಾರರನ್ನು ಕೈ ಬಿಟ್ಟ ಆರ್ ಸಿಬಿ ಈಗ ಪಶ್ಚಾತ್ತಾಪ ಪಡುತ್ತಿದೆ. ಹೀಗಾಗಿ ಮತ್ತೊಂದು ಅವಕಾಶ ಸಿಕ್ಕರೆ ಆರ್ ಸಿಬಿ ಈ ಆಟಗಾರರನ್ನು ಎರಡೂ ಕೈ ಬಾಚಿ ಕರೆಸಿಕೊಳ್ಳುವುದು ಖಚಿತ. ಹೀಗಾಗಿ ಪಂಜಾಬ್ ನಿಷೇಧಕ್ಕೊಳಗಾದರೆ ಲಾಭ ಪಡೆಯುವುದು ಆರ್ ಸಿಬಿ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ