ಮುಂಬೈ: ಕೊನೆಗೂ ಗಳು ಕೊನೆಕ್ಷಣದ ಮ್ಯಾಜಿಕ್ ಮಾಡಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಬಲ ಮುಂಬೈ ತಂಡವನ್ನು 20 ಓವರ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಐಪಿಎಲ್ ಫೈನಲ್ ಗೇರಿದ ದಾಖಲೆ ಮಾಡಿದ್ದಾರೆ.
ಮಾಜಿ ನಾಯಕ ಧೋನಿ ಕೊನೆಯ ಓವರ್ ಗಳಲ್ಲಿ ಇನ್ನಿಲ್ಲದಂತೆ ಸಿಡಿದು ಕೇವಲ 26 ಬಾಲ್ ಗಳಲ್ಲಿ 40 ರನ್ ಗಳಿಸಿದರು. ಇದರಿಂದಾಗಿ ಪುಣೆ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈಯ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ, ಪೊಲ್ಲಾರ್ಡ್ ಬೇಗನೇ ಪೆವಿಲಿಯನ್ ಗೆ ಮರಳಿದ್ದು ದುಬಾರಿಯಾಯಿತು. ಸುಂದರ್ ಮೂರು ವಿಕೆಟ್ ಕಿತ್ತು ಆಘಾತ ನೀಡಿದರು. ಪಾರ್ಥಿವ್ ಪಟೇಲ್ ಒಬ್ಬರೇ ಏಕಾಂಗಿಯಾಗಿ ಹೋರಾಡಿ 52 ರನ್ ಗಳಿಸಿದರು.
ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಂದಿಗೆ ಮುಂಬೈ ಇದೀಗ ಎಲಿಮಿನೇಟರ್ ಪಂದ್ಯ ಆಡಲಿದೆ. ಅತ್ತ ಪುಣೆಗೆ ಎರಡನೇ ಋತುವಿನಲ್ಲೇ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸುವ ಅವಕಾಶ ಒದಗಿ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ