ಬೆಂಗಳೂರು: ಮತ್ತೊಂದು ಐಪಿಎಲ್ ಚಾಂಪಿಯನ್ ಆಗಲು ಕೋಲ್ಕೊತ್ತಾ ನೈಟ್ ರೈಡರ್ಸ್ ರೆಡಿಯಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ.
ಬೆಂಗಳೂರಿನಲ್ಲಿ ನಡೆದ ಕ್ವಾಲಿಫೈಯರ್ 2 ನೇ ಪಂದ್ಯದಲ್ಲಿ ಮಳೆಯದ್ದೇ ಅಬ್ಬರವಾಗಿತ್ತು. ಹೀಗಾಗಿ ಓವರ್ ಕಡಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಸಂಪೂರ್ಣ 20 ಓವರ್ ಆಡಿ 128 ರನ್ ಗಳಿಸಿತು. ನಂತರ ಮಳೆ ಸುರಿದಿದ್ದರಿಂದ ಪಂದ್ಯವನ್ನು 6 ಓವರ್ ಗಳಿಗೆ ಕಡಿತಗೊಳಿಸಿ 47 ರನ್ ಗುರಿ ನಿಗದಿಪಡಿಸಲಾಯಿತು.
ನಂತರ ಬ್ಯಾಟಿಂಗ್ ಮಾಡಿದ ಕೆಕೆಆರ್ ಇದನ್ನು ಕೇವಲ 5.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತ್ತು. ಇದರೊಂದಿಗೆ ಕೆಕೆಆರ್ ಮತ್ತೊಮ್ಮೆ ಟೈಟಲ್ ಗೆ ಮುತ್ತಿಕ್ಕುವ ಅವಕಾಶ ಪಡೆದುಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ