ಚೆನ್ನೈ: ಐಪಿಎಲ್ ನಲ್ಲಿ ಒಂದು ಕಾಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಧೋನಿ ಎನ್ನುವಷ್ಟು ಜನಪ್ರಿಯವಾಗಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಧೋನಿ ಅನಿವಾರ್ಯವಾಗಿ ಪುಣೆ ತಂಡದ ಪಾಲಾದರು. ಇದೀಗ ಮತ್ತೆ ಅವರು ಚೆನ್ನೈ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆಯೇ?!
ಹೌದು ಎನ್ನುತ್ತಿದ್ದಾರೆ ಮಾಲಿಕ ಎನ್. ಶ್ರೀನಿವಾಸನ್. ಚೆನ್ನೈ ತಂಡದ ಮೇಲಿನ ನಿಷೇಧ ಮುಂದಿನ ವರ್ಷದ ಐಪಿಎಲ್ ಗಾಗುವಾಗ ಮುಕ್ತಾಯಗೊಳ್ಳಲಿದೆ. ಹೀಗಾಗಿ ಆ ಆವೃತ್ತಿಗೆ ಮತ್ತೆ ಧೋನಿ ಚೆನ್ನೈ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಪುಣೆ ತಂಡದ ನಾಯಕನಾಗಿದ್ದ ಧೋನಿ, ಈ ವರ್ಷ ನಾಯಕತ್ವ ಕಳೆದುಕೊಂಡು ಕೇವಲ ಆಟಗಾರನಾಗಿ ಮುಂದುವರಿದಿದ್ದಾರೆ. 2018 ರ ಹೊತ್ತಿಗೆ ಧೋನಿ ಚೆನ್ನೈ ತಂಡ ಕೂಡಿಕೊಳ್ಳಲಿದ್ದು, ನಾಯಕರಾಗುತ್ತಾರೆ ಎಂದು ಶ್ರೀನಿವಾಸ್ ಭರವಸೆಯಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ