ನವದೆಹಲಿ: ದೇಶಾದ್ಯಂತ ಒಂದೇ ದೇಶ ಒಂದೇ ತೆರಿಗೆ ಎಂಬಂತೆ ಜಿಎಸ್ ಟಿ ಜಾರಿಯಾಗಿದ್ದೇ ತಡ, ಐಪಿಎಲ್ ಪಂದ್ಯಗಳೂ ದುಬಾರಿಯಾಯ್ತು.
ಮುಂದಿನ ದಿನಗಳಲ್ಲಿ ಐಪಿಎಲ್ ನೋಡಲು ಮೈದಾನಕ್ಕೆ ತೆರಳುವವರು ಸ್ವಲ್ಪ ಹೆಚ್ಚಿಗೆ ತೆರಿಗೆ ಕಟ್ಟಬೇಕು. ಇದರಿಂದ ಕ್ರೀಡಾಸಕ್ತರಿಗೆ ಕೊಂಚ ನಿರಾಸೆಯಾಗಿರುವುದು ಸಹಜ.
ಐಪಿಎಲ್ ಪಂದ್ಯಗಳಿಗೆ ಮನರಂಜನೆ ತೆರಿಗೆ ಅನ್ವಯವಾಗುವುದರಿಂದ ಶೇ.28 ತೆರಿಗೆ ಬೀಳುತ್ತದೆ. ಇದು ಖಾಸಗಿ ಫ್ರಾಂಚೈಸಿಗಳು ನಡೆಸುವುದರಿಂದ ದುಬಾರಿಯಾಗಲಿದೆ. ಆದರೆ ಉಳಿದ ಕ್ರೀಡೆಗಳು ಸರ್ಕಾರಿ ಮಂಡಳಿಗಳ ಉಸ್ತುವಾರಿಯಲ್ಲಿ ನಡೆಯುವುದರಿಂದ ಶೇ. 18 ರಷ್ಟು ತೆರಿಗೆ ವಿಧಿಸಲಾಗುವುದಷ್ಟೆ.
ಟಿಕೆಟ್ ದರ 250 ರೂ. ಗಿಂತ ಕಡಿಮೆಯಿದ್ದರೆ ಮಾತ್ರ ತೆರಿಗೆಯಿಂದ ವಿನಾಯಿತಿ ಪಡೆಯಲಿದೆ. ಉಳಿದಂತೆ ಎಲ್ಲಾ ಟಿಕೆಟ್ ದರಗಳು ಹೆಚ್ಚಳವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ