ಬಿಲಿಯನ್ ಡಾಲರ್ ಬೇಬಿ ಐಪಿಎಲ್ ಸರಣಿ ಪ್ಲೇಆಫ್ಸ್ ಹಂತ ತಲುಪಿದೆ. ಮುಂಬೈ ಇಂಡಿಯನ್ಸ್, ಪುಣೆ ಸೂಪರ್ ಜಾಯಿಂಟ್, ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕ್ರಮವಾಗಿ 1ರಿಂದ 4ನೇ ಸ್ಥಾನದಲ್ಲಿವೆ.
ಹೇಗೆ ನಡೆಯುತ್ತೆ ಪ್ಲೇಆಫ್ಸ್..?: ಅಗ್ರ ಸ್ಥಾನದಲ್ಲಿರುವ ಮೊದಲೆರಡು ತಂಡ ಕ್ವಾಲಿಫೈಯರ್ ಮತ್ತು 3-4ನೇ ತಂಡ ಎಲಿಮಿನೇಟರ್`ನಲ್ಲಿ ಸೆಣೆಸಲಿವೆ. ಕ್ವಾಲಿಫೈಯರ್`ನಲ್ಲಿ ಗೆದ್ದ ತಂಡ ನೇರ ಫೈನಲ್`ಗೆ ಎಂಟ್ರಿಕೊಡುತ್ತೆ. ಸೋತ ತಂಡಕ್ಕೆ ಮತ್ತೊಂದು ಅವಕಾಶವಿರುತ್ತದೆ. ಎಲಿಮಿನೇಟರ್`ನಲ್ಲಿ ಗೆದ್ದ ತಂಡದ ವಿರುದ್ಧ ಮತ್ತೊಂದು ಪಂಡದ್ಯ ಆಡಲಿದೆ. ಇಲ್ಲಿ ಗೆದ್ದವರು 2ನೇಯ ತಂಡವಾಗಿ ಫೈನಲ್`ಗೆ ಎಂಟ್ರಿ ಕೊಡುತ್ತಾರೆ.
ಎಲಿಮಿನೇಟರ್`ನಲ್ಲಿ ಆಡುವ 3 ಮತ್ತು 4ನೇ ತಂಡಕ್ಕೆ ಎರಡನೇ ಅವಕಾಶ ಇರುವುದಿಲ್ಲ. ಇದು ಪಕ್ಕಾ ನಾಕೌಟ್ ಹಂತ. ಸೋತ ತಂಡ ಟೂರ್ನಿಯಿಂದ ಹೊರಬೀಳುತ್ತೆ. ಗೆದ್ದ ತಂಡ ಕ್ವಾಲಿಫೈಯರ್`ನಲ್ಲಿ ಸೋತ ತಂಡದ ವಿರುದ್ಧ ಮತ್ತೊಂದು ಪಂದ್ಯ ಆಡಿ ಅಲ್ಲಿ ಗೆದ್ದವರು ಫೈನಲ್ಗೇರುತ್ತಾರೆ.
ಮೇ 16ರಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಪುಣೆ ತಂಡಗಳು ಸೆಣೆಸಲಿವೆ. ಇಲ್ಲಿ ಗೆದ್ದ ತಂಡ ನೇರ ಫೈನಲ್ಗೇರಲಿದೆ. ಸೋತ ತಂಡಕ್ಕೆ ಮತ್ತೊಮದು ಅವಕಾಶವಿರುತ್ತೆ. ಎಲಿಮಿನೇಟರ್`ನಲ್ಲಿ ಗೆದ್ದ ತಂಡ ವಿರುದ್ಧ ಮತ್ತೊಂದು ಪಂದ್ಯವಾಡಿ ಅದರಲ್ಲಿ ಗೆದ್ದವರು ಫೈನಲ್`ಗೇರುತ್ತಾರೆ.
ಮೇ17ರಂದು ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಸೆಣೆಸಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ