ಸರಣಿಯುದ್ದಕ್ಕೂ ಫಾರ್ಮ್ ಕಂಡು ಕೊಳ್ಳಲು ಒದ್ದಾಡುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಬೆಂಗಳೂರಿನಲ್ಲಿ ನಡೆದ ಾರ್ಸಿಬಿ ವಿರುದ್ಧ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಅಷ್ಟೇ ಅಲ್ಲ, ಈ ಸೀಸನ್ನಿನ ಬಿಗ್ಗೆಸ್ಟ್ ಸಿಕ್ಸ್ ಸಿಡಿಸಿ ಸಂಭ್ರಮಿಸಿದ್ದಾರೆ. ಧೋನಿ ಹೊಡೆದ ಸಿಕ್ಸರ್`ನಿಂದಾಗಿ ಬಾಲ್ ಚಿನ್ನಸ್ವಾಮಿ ಸ್ಟೇಡಿಯಂನ ಟೆರೇಸ್ ಸೇರಿತ್ತು.
14ನೇ ಓವರಿನಲ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎಸೆದ ಚೆಂಡನ್ನ ಧೋನಿ ಮುಂದೆ ಬಂದು ಬಾರಿಸಿದರು. ಧೋನಿ ಹೊಡೆದ ಆಕ್ರಮಣಕಾರಿ ಹೊಡೆತಕ್ಕೆ ಚೆಂಡು ಸ್ಟೇಡಿಯಂ ರೂಫ್ ಸೇರಿತು. ಿದು ಟೂರ್ನಿಯ ಬಿಗ್ಗೆಸ್ಟ್ ಸಿಕ್ಸ್ ಎನ್ನಲಾಗಿದೆ.
25 ಎಸೆತಗಳನ್ನ ಎದುರಿಸಿದ ಧೋನಿ 4 ಬೌಂಡರಿ 1 ಸಿಕ್ಸರ್ ಸಹಿತ 28 ರನ್ ಸಿಡಿಸಿದರು. ಈ ಹಿಂದಿನ ಪಂದ್ಯಗಳಲ್ಲಿ 12, 5, 11 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ದರು. ಧೋನಿ ಮೇಲೆ ಭಾರೀ ಒತ್ತಡವೂ ಇತ್ತು. ಬ್ಯಾಟಿಂಗ್`ನಲ್ಲಷ್ಟೇ ಅಲ್ಲ, ಕೀಪಿಂಗ್`ನಲ್ಲಿ ಗಮನ ಸೆಳೆದರು. ಇಮ್ರಾನ್ ತಾಹೀರ್ ಎಸೆತದಲ್ಲಿ ಎಬಿಡಿಯನ್ನ ಸ್ಟಂಪ್ ವಟ್ ಮಡುವ ಮೂಲಕ ತಂಡದ ಗೆಲುವಿಗೆ ನೆರವಾದರು.