ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಲೂಯಿಸ್ ಮೌಂಟ್ ಬೇಟನ್ ಪತ್ನಿ ಎಡ್ವಿನಾ ಆಶ್ಲೇ ನಡುವೆ ಪ್ರೀತಿ ಇದ್ದಿದ್ದು ನಿಜ ಎಂದು ಎಡ್ವಿನಾ ಪುತ್ರಿ ಪಮೇಲಾ ಹಿಕ್ಸ್ ನೀ ಮೌಂಟ್ ಬೇಟನ್ ಒಪ್ಪಿಕೊಂಡಿದ್ದಾರೆ.
“ಡಾಟರ್ ಆಫ್ ಎಂಪಯರ್: ಲೈಫ್ ಆಸ್ ಎ ಮೌಂಟ್ ಬೇಟನ್” ಎಂಬ ಪಮೇಲಾ ಬರೆದ ಪುಸ್ತಕದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ತಂದೆ, ತಾಯಿ ಜತೆ ಭಾರತಕ್ಕೆ ಬರುವಾಗ ಹಿಕ್ಸ್ ಗೆ 17 ವರ್ಷವಾಗಿತ್ತಂತೆ. ಈ ಸಂದರ್ಭದಲ್ಲಿ ನೆಹರೂ ಮತ್ತು ತನ್ನ ತಾಯಿ ಎಡ್ವಿನಾ ಪರಸ್ಪರ ಆಕರ್ಷಿತರಾಗಿದ್ದುನಿಜ. ಆದರೆ ಇಬ್ಬರಿಗೂ ದೈಹಿಕ ಸಂಬಂಧ ಬೆಳೆಸಲು ಏಕಾಂತ ಸಿಕ್ಕಿರಲಿಲ್ಲ ಎಂದು ಸ್ಪೋಟಕ ಸತ್ಯ ಬಹಿರಂಗಪಡಿಸಿದ್ದಾರೆ.
ಇಬ್ಬರ ನಡುವೆ ಆಕರ್ಷಣೆಯಿದ್ದಿದ್ದು ನಿಜ ಎಂದು ತನಗೆ ಗೊತ್ತಾಗಿತ್ತು. ಆದರೆ ಇದು ದೈಹಿಕ ಸಂಬಂಧದವರೆಗೆ ಮುಂದುವರಿದಿತ್ತಾ ಎಂದು ಗೊತ್ತಾಗಬೇಕಿತ್ತು. ಅದಕ್ಕಾಗಿ ಅವರ ಪತ್ರಗಳನ್ನು ಓದಿದ್ದೆ. ಆಗ ನನಗೆ ಅವರು ಪರಸ್ಪರ ಎಷ್ಟು ಗೌರವ ಇಟ್ಟುಕೊಂಡಿದ್ದರು ಎಂದು ಗೊತ್ತಾಗಿತ್ತು. ಆದರೆ ಅವರಿಬ್ಬರ ನಡುವೆ ದೈಹಿಕ ಸಂಬಂಧ ನಡೆದಿರಲಿಲ್ಲ ಎಂದು ಸ್ಪಷ್ಟವಾಯಿತು ಎಂದು ಎಡ್ವಿನಾ ಪುತ್ರಿ ಹೇಳಿದ್ದಾರೆ.