ವಾಷಿಂಗ್ಟನ್ : ಜೀನ್ಸ್ ಪ್ಯಾಂಟ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಇಂದಿನ ಯುವಕ-ಯುವತಿಯರಿಗೆ ಟ್ರೆಂಡಿಯಾದ ಜೀನ್ಸ್ ಧರಿಸೋದು ಗೀಳಾಗಿಬಿಟ್ಟಿದೆ. ಅದಕ್ಕಾಗಿ ಸಾವಿರಾರು ರೂ.ಗಳನ್ನ ಕೊಟ್ಟು ಖರೀದಿಸುತ್ತಾರೆ.
ಆದ್ರೆ ವಿಶ್ವದ ಹಳೆಯ ಜೀನ್ಸ್ಪ್ಯಾಂಟ್ವೊಂದನ್ನು ಲಕ್ಷ ಲಕ್ಷ ಕೊಟ್ಟು ಖರೀದಿರುವ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ. ಹೌದು. ಶತಮಾನಗಳಿಂದಲೂ, ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಲಾಕೃತಿಗಳನ್ನು ತಜ್ಞರು ಕಂಡುಹಿಡಿದಿದ್ದಾರೆ.
ಅವು ಹಿಂದಿನ ಯುಗದ ನೋಟವನ್ನು ತೆರೆದಿಡುತ್ತವೆ. ವರ್ಷ ಕಳೆದಂತೆ ಐತಿಹಾಸಿಕ ಕಲಾಕೃತಿಗಳ ಮೌಲ್ಯ ಹೆಚ್ಚಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ.
ಹಾಗೆಯೇ 1857ರಲ್ಲಿ ಉತ್ತರ ಕೆರೊಲಿನಾದ ಕರಾವಳಿಯಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ ಕಳೆದುಹೋಗಿದ್ದ ಜೀನ್ಸ್ಪ್ಯಾಂಟ್ವೊಂದು ಪತ್ತೆಯಾಗಿದೆ. ಇದನ್ನು ವಿಶ್ವದ ಹಳೆಯ ಜೀನ್ಸ್ಪ್ಯಾಂಟ್ ಎಂದು ಗುರುತಿಸಲಾಗಿದ್ದು, 94 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ.