Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವದ ಹಿರಿಯ 38 ವರ್ಷದ ಪಾಂಡಾ ಸಾವು

ವಿಶ್ವದ ಹಿರಿಯ 38 ವರ್ಷದ ಪಾಂಡಾ ಸಾವು
ಹಾಂಗ್ ಕಾಂಗ್ , ಮಂಗಳವಾರ, 18 ಅಕ್ಟೋಬರ್ 2016 (13:21 IST)

ಹಾಂಗ್ ಕಾಂಗ್: ಜಗತ್ತಿನ ಅತೀ ಹಿರಿಯ ಪಾಂಡಾ ಸಾವನ್ನಪ್ಪಿದೆ. ಜಿಯಾ ಜಿಯಾ ಹೆಸರಿನ 38 ವರ್ಷದ ಹೆಣ್ಣು ಪಾಂಡಾ ವಯೋ ಸಹಜ ಹಾಗೂ ಅನಾರೋಗ್ಯದಿಂದ ಇಲ್ಲಿನ ಥೀಮ್ ಪಾರ್ಕ್ ನಲ್ಲಿ ಮೃತಪಟ್ಟಿದೆ.
 

ಪಾಂಡಾದ ಸರಾಸರಿ ಜೀವತಾವಧಿ ಕೇವಲ 20 ವರ್ಷ. ಆದರೆ ಈ ಪಾಂಡಾ 38 ವರ್ಷಗಳ ಕಾಲ ಬದುಕಿ ಹೊಸ ದಾಖಲೆ ನಿರ್ಮಿಸಿತ್ತು. ಅಂದರೆ ಮನುಷ್ಯನ ವಯಸ್ಸಿಗೆ ಹೋಲಿಕೆ ಮಾಡಿದರೆ 114 ವರ್ಷ ಜೀವಿತಾವಧಿ ಅದರದ್ದಾಗಿದೆ.
 


 

ಕಳೆದ ಎರಡು ವಾರಗಳಿಂದ ಆಹಾರ ಸೇವನೆಯನ್ನು ಈ ಪಾಂಡಾ ತ್ಯಜಿಸಿತ್ತು. ಇದರಿಂದ ಪಚನ ಕ್ರಿಯೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿ ಹೋಗಿತ್ತು. ದಿನದಿಂದ ದಿನಕ್ಕೆ ನಾಲ್ಕೈದು ಕೆಜಿ ತೂಕ ಕಡಿಮೆಯಾಗುತ್ತ ಕೃಶವಾಗುತ್ತ ಬಂದಿತ್ತು. ನಡೆದಾಡಲು ಸಹ ಆಗದೇ ನಿತ್ರಾಣಗೊಂಡಿರುವ ಪಾಂಡಾ ವಯೋ ಸಹಜ ಸಾವು ಕಂಡಿದೆ ಎಂದು ಥೀಮ್ ಪಾರ್ಕ್ ಪಶು ವೈದ್ಯರ ತಂಡ ತಿಳಿಸಿದೆ.
 

ಜಿಯಾ ಜಿಯಾ ಎಂದರೆ ಇಂಗ್ಲೀಷ್ನಲ್ಲಿ ಗುಡ್ ಅಂತ ಅರ್ಥ. 1999ರಲ್ಲಿ ಚೀನಿಸ್ ಸರಕಾರ ಥೀಮ್ ಪಾರ್ಕ್ ಗೆ ಈ ಪಾಂಡಾವನ್ನು ಉಡುಗೊರೆಯಾಗಿ ನೀಡಿತ್ತು. ಸದ್ಯ ಪಾಂಡಾಗಳ ಸಂತತಿ ಬಗ್ಗೆ ಮಾಹಿತಿ ನೀಡಿರುವ ವೈಲ್ಡ್ ಲೈಫ್ ನವರು ಜಗತ್ತಿನಲ್ಲಿ 2000ಕ್ಕೂ ಕಡಿಮೆ ಪಾಂಡಾ ಇರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್.ಎಸ್.ಎಸ್. ಕಾರ್ಯಕರ್ತರ ಹತ್ಯೆಗೆ ರಾಜ್ಯ ಸರಕಾರ ಕುಮ್ಮಕ್ಕು