ಐಫೋನ್ ಇಟ್ಟುಕೊಳ್ಳುವುದು ಬಹುತೇಕ ಜನರಿಗೆ ಈಗ ಪ್ರತಿಷ್ಠೆಯ ವಿಷಯ. ಅಂತಹ ಐಫೋನ್`ಗಾಗಿ ಏನೆಲ್ಲ ಮಾಡಿರುವವರ ಸುದ್ದಿಗಳನ್ನ ನೋಡಿದ್ದೇವೆ. ಇದೀಗ, ಮಹಿಳೆಯೊಬ್ಬಳು ಬರೋಬ್ಬರಿ 102 ಐಫೋನ್`ಗಳನ್ನ ಮೈಗೆ ಅಂಟಿಸಿಕೊಮಡು ಕಳ್ಳ ಸಾಗಣೆ ಮಾಡುವಾಗ ಚೀನಾ ನಶೆಂಝೆನ್ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ.
ಮಹಿಳೆಯ ದೇಹದ ಭಾಗ ವಿಚಿತ್ರವಾಗಿದ್ದನ್ನ ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಹಿಡಿದು ತನಿಖೆ ನಡೆಸಿದಾಗ ಹಿಂಬದಿ ಸೊಂಟದ ಮೇಲೆ ಅಂಟಿಸಿಕೊಂಡಿದ್ದ ಮೂರು ಪದರಗಳು ಪತ್ತೆಯಾಗಿದ್ದು, ಪ್ರತಿಯೊಂದು ಪದರದಲ್ಲಿ 30ಕ್ಕೂ ಹೆಚ್ಚು ಐಫೋನ್`ಗಳು ಸಿಕ್ಕಿವೆ. ಇದರ ಜೊತೆಗೆ 14 ಬೆಲೆಬಾಳುವ ಕೈಗಡಿಯಾರಗಳೂ ಸಿಕ್ಕಿವೆ. ಐಫೋನ್`ಗಳನ್ನ ಈ ಮಹಿಳೆ ಹಾಂಗ್ ಕಾಂಗ್`ನಿಂದ ಚೀನಾದ ಮೇನ್ ಲ್ಯಾಂಡ್`ಗೆ ಕಳ್ಳಸಾಗಣೆ ಮಾಡುತ್ತಿದ್ದಳೆಂದು ತನಿಖೆ ವೇಳೆ ತಿಳಿದುಬಂದಿದೆ.
ಐಫೋನ್`ಗಳ ಮೆಲೆ ಮೇನ್ ಲ್ಯಾಂಡ್`ನಲ್ಲಿ ಶೇ.30ರಷ್ಟು ಹೆಚ್ಚಿದ್ದು, ವಾಮಮಾರ್ಗದಲ್ಲಿ ಲಾಭ ಮಾಡುವ ದೃಷ್ಟಿಯಿಂದ ಈ ಮಹಿಳೆ ಕಳ್ಖಸಾಗಣೆಗೆ ಮುಂದಾಗಿದ್ದಳೆಂದು ತಿಳಿದು ಬಂದಿದೆ. ಇದುವರೆಗೆ ರೇಡ್ ಮಾಡಲಾದ ಐಫೋನ್ ಕಳ್ಳಸಾಗಣೆ ಪ್ರಕರಣಗಳಲ್ಲೇ ಇದು ಅತ್ಯಂತ ದೊಡ್ಡದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ