ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಐಸಿಸ್ ಉಗ್ರರಿಂದ ಮೂರಂತಸ್ತಿನ ಕಟ್ಟಡವನ್ನು ಸುತ್ತುವರಿದಿರುವುದನ್ನು ಕಂಡ ಐಸಿಸ್ ಮಹಿಳಾ ಉಗ್ರಗಾಮಿಯೊಬ್ಬಳು ಮತ್ತು ಯುವಕನೊಬ್ಬ ತಮ್ಮನ್ನು ತಾವೇ ಸ್ಫೋಟಿಸಿಕೊಂಡ ಘಟನೆ ನಡೆದಿದೆ
ಢಾಕಾದಲ್ಲಿ ನಡೆದ ಕೆಫೆ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು ಮನೆಯಲ್ಲಿ ಅಡಗಿದ್ದಾರೆ ಎನ್ನುವ ಮಾಹಿತಿ ಪಡೆದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಮನೆಯನ್ನು ಸುತ್ತುವರಿದು ಶರಣಾಗುವಂತೆ ಒತ್ತಡ ಹೇರಿದ್ದಾರೆ.
ಇದಕ್ಕಿಂತ ಮೊದಲು, ಇಬ್ಬರು ಮಹಿಳೆಯರು ಮತ್ತು ಕೆಲ ಮಕ್ಕಳು ಮನೆಯಿಂದ ಹೊರಬಂದು ಪೊಲೀಸರಿಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹಿಳಾ ಉಗ್ರಗಾಮಿ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮವಾಗಿ ಪಕ್ಕದಲ್ಲಿದ್ದ ಕೆಲ ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಸಿಸ್ ಉಗ್ರರು ಗ್ರೇನೆಡ್ ಮತ್ತು ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿಯಾಗಿ ಭದ್ರತಾ ನಿಗ್ರಹ ದಳದ ಪಡೆ ಗುಂಡಿನ ದಾಳಿ ಮುಂದುವರಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.