Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫೇಸ್ ಬುಕ್ ಕಚೇರಿಯ ಮುಂದೆ ಸೆನ್ಸಾರ್ ವಿರೋಧಿ ಗುಂಪುಗಳು ಬೆತ್ತಲೆ ಪ್ರತಿಭಟನೆ ನಡೆಸಿದ್ದೇಕೆ?

ಫೇಸ್ ಬುಕ್ ಕಚೇರಿಯ ಮುಂದೆ ಸೆನ್ಸಾರ್ ವಿರೋಧಿ ಗುಂಪುಗಳು ಬೆತ್ತಲೆ ಪ್ರತಿಭಟನೆ ನಡೆಸಿದ್ದೇಕೆ?
ನ್ಯೂಯಾರ್ಕ್ , ಗುರುವಾರ, 6 ಜೂನ್ 2019 (07:29 IST)
ನ್ಯೂಯಾರ್ಕ್ : ಫೇಸ್‍ ಬುಕ್ ನಲ್ಲಿ  ನಗ್ನ ಚಿತ್ರಗಳ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಸೆನ್ಸಾರ್ ವಿರೋಧಿ ಗುಂಪುಗಳು ಫೇಸ್ ಬುಕ್ ನ್ಯೂಯಾರ್ಕ್ ಪ್ರಧಾನ ಕಚೇರಿಯ ಹೊರಗೆ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.




ಫೇಸ್‍ ಬುಕ್ ನಲ್ಲಿ  ನಗ್ನ ಚಿತ್ರಗಳಿಗೆ ನಿಷೇಧ ಹೇರಿದ ಕಾರಣ ಬಳಕೆದಾರರು ನಗ್ನ ಚಿತ್ರ ಹಾಕಿದ್ದರೆ ಅದನ್ನು ಡಿಲೀಟ್ ಮಾಡಲಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡ ಸೆನ್ಸಾರ್ ವಿರೋಧಿ ಗುಂಪುಗಳು ಫೇಸ್ ಬುಕ್ ಗಂಡಸರ ಎದೆಯ ಭಾಗ ತೋರಿಸಿದರೆ ಸೆನ್ಸಾರ್ ಮಾಡುವುದಿಲ್ಲ ಆದರೆ ಮಹಿಳೆಯರು ಹಾಕಿದರೆ ತೆಗೆದು ಹಾಕಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.


ಅಲ್ಲದೇ ಸುಮಾರು 100 ಸೆನ್ಸಾರ್ ಶಿಪ್ ವಿರೋಧಿ ಕಾರ್ಯಕರ್ತರು ನ್ಯೂಯಾರ್ಕ್‌ ನಲ್ಲಿರುವ ಫೇಸ್‍ ಬುಕ್ ಪ್ರಧಾನ ಕಚೇರಿ ಮುಂದೆ ನಗ್ನವಾಗಿ ರಸ್ತೆ ಮೇಲೆ ಮಲಗಿ ತಮ್ಮ ಅಂಗಾಂಗವನ್ನು ಮುಚ್ಚಿಕೊಳ್ಳಲು ಗಂಡಸರ ಸ್ತನ ತೊಟ್ಟಿನ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ನೋಡಿ ಬಹುಮಾನ ಗೆಲ್ಲಲು ಜಿಯೋ ಈ ಪ್ಯಾಕ್ ರಿಚಾರ್ಜ್ ಮಾಡಿ