Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರು ಮಂದಿಯಲ್ಲಿ ಪಾಕಿಸ್ತಾನಕ್ಕೆ ಯಾರು?

ಆರು ಮಂದಿಯಲ್ಲಿ ಪಾಕಿಸ್ತಾನಕ್ಕೆ ಯಾರು?
ಇಸ್ಲಾಮಾಬಾದ್ , ಮಂಗಳವಾರ, 1 ಆಗಸ್ಟ್ 2017 (10:00 IST)
ಇಸ್ಲಾಮಾಬಾದ್: ಭ್ರಷ್ಟಾಚಾರಕ್ಕೆ ಸಿಲುಕಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನವಾಜ್ ಷರೀಫ್ ಸ್ಥಾನಕ್ಕೆ  ಪಾಕಿಸ್ತಾನದ ನೂತನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇಂದು ಉತ್ತರ ದೊರಕಲಿದೆ.


ಮಧ್ಯಂತರ ಪ್ರಧಾನಿ ಹುದ್ದೆಗೆ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಯಾರು ಪ್ರಧಾನಿಯಾಗುತ್ತಾರೆ ಎಂಬುದು ಸದ್ಯದ ಕುತೂಹಲ. ಆಡಳಿತಾರೂಢ ನವಾಜ್ ಷರೀಫ್ ರ ಪಿಎಂಎಲ್ ಎನ್ ಪಕ್ಷ ಶಾಹಿದ್ ಕಖಾನ್ ಅಬ್ಬಾಸಿಯವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ.

ಮೊದಲು ಷರೀಫ್ ಸಹೋದರನೇ ಪ್ರಧಾನಿ ಪಟ್ಟಕ್ಕೇರುತ್ತಾರೆ ಎಂದಿತ್ತು. ಆದರೆ ಷರೀಫ್ ಸಹೋದ್ ಶಹಜಾದ್ ಸಂಸದರಲ್ಲದ ಕಾರಣ ಎರಡು ತಿಂಗಳ ಮಟ್ಟಿಗೆ ಹೊಸ ಪ್ರಧಾನಿಯನ್ನು ಹುಡುಕುವುದು ಷರೀಫ್ ಗೆ ಅನಿವಾರ್ಯವಾಗಿದೆ. ಆದರೆ ಎರಡು ತಿಂಗಳ ಬಳಿಕ ನಡೆಯಲಿರುವ ಸಂಸತ್ತು ಚುನಾವಣೆಯಲ್ಲಿ ಸ್ಪರ್ಧಿಸಿ ಸಹೋದರನನ್ನು ಪ್ರಧಾನಿ ಪಟ್ಟಕ್ಕೆ ಕೂರಿಸುವ ಯೋಜನೆ ಷರೀಫ್ ಗಿದೆ. ಸಂಸತ್ತಿನಲ್ಲಿ ಷರೀಫ್ ಪಕ್ಷಕ್ಕೆ ಬಹುತಮವಿರುವುದರಿಂದ ಅಬ್ಬಾಸಿ ಗೆಲ್ಲುವ ಬಹುತೇಕ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಗಾಗಿ ಸೀರೆ ಕದ್ದು ಸಿಕ್ಕಿಬಿದ್ದ!