ಆಸ್ಟ್ರೇಲಿಯಾ : ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಸಿಲುಕಿ ಕೋಮಾ ಸ್ಥಿತಿಗೆ ತಲುಪಿದ ವ್ಯಕ್ತಿಯೊಬ್ಬ ಪ್ರಜ್ಞೆ ಬಂದ ಬಳಿಕ ಕೇಳಿದ ವಸ್ತುವನ್ನು ಕೇಳಿ ಆಸ್ಪತ್ರೆಯ ಸಿಬ್ಬಂದಿಗಳು ದಂಗಾಗಿದ್ದಾರೆ.
ಹೌದು. ಓಕ್ ಬ್ಯಾಂಕ್ ರೇಸಿಂಗ್ ಕ್ಲಬ್ ಚೇರ್ಮನ್ ಜಾನ್ ಗ್ಲಾಟ್ಜ್ (73)ಎಂಬುವವರು ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ತನ್ನ ಮನೆ ಮತ್ತು ಕುದುರೆಯನ್ನು ಕಾಪಾಡಲು ಹೋಗಿ ಬೆಂಕಿಗೆ ಸಿಲುಕಿದ್ದಾರೆ. ಈ ಘಟನೆಯಲ್ಲಿ ಅವರ ದೇಹ 60% ನಷ್ಟು ಸುಟ್ಟು ಹೋಗಿದ್ದು, ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇವರನ್ನು ಅಡಿಲೇಡ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೋಮಾ ಸ್ಥಿತಿಗೆ ತಲುಪಿದ ಹಿನ್ನಲೆ ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಪ್ರಜ್ಞೆ ಬಂದ ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ನಿಮಗೆ ಕುಡಿಯಲು ನೀರು ಬೇಕೆ? ಎಂದು ಕೇಳಿದ್ದಾರೆ. ಆದರೆ ಈತ ನನಗೆ ಬಿಯರ್ ಬೇಕು ಎಂದು ಕೇಳಿದ್ದು, ಆತನ ಮಾತನ್ನು ಕೇಳಿ ಒಮ್ಮೆ ಆಸ್ಪತ್ರೆಯ ಸಿಬ್ಬಂದಿಗಳು ದಂಗಾಗಿದ್ದಾರೆ.