ಜರ್ಮನಿ : ತೆಂಗಿನೆಣ್ಣೆ ಶುದ್ಧ ವಿಷ' ಅದನ್ನು ಸೇವಿಸುವುದು ಅತ್ಯಂತ ಕೆಟ್ಟದ್ದು ಎಂದು ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ಕರಿನ್ ಮಿಚೆಲ್ ಹೇಳಿದ್ದಾರೆ.
ಜರ್ಮನಿಯಲ್ಲಿ ನಡೆದ ಸಂವಾದ ಒಂದರಲ್ಲಿ ಮಾತನಾಡಿದ ಮಿಚೆಲ್ ‘ತೆಂಗಿನೆಣ್ಣೆ ಶುದ್ಧ ವಿಷ' ಎಂದು ಕನಿಷ್ಠ ಮೂರು ಬಾರಿ ಹೇಳಿದ್ದಾರೆ. ತೆಂಗಿನ ಎಣ್ಣೆಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ತೆಂಗಿನ ಎಣ್ಣೆಯಿಂದ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ ಜೊತೆಗೆ ಕೊಬ್ಬಿನ ಅಂಶವೂ ಹೆಚ್ಚಾಗುತ್ತದೆ ಎಂದು ಮಿಚೆಲ್ ಅಭಿಪ್ರಾಯಪಟ್ಟಿದ್ದಾರೆ.
ತೆಂಗಿನೆಣ್ಣೆಯಲ್ಲಿನ ಶೇ 80ಕ್ಕೂ ಅಧಿಕ ಕೊಬ್ಬಿನಂಶ ಸ್ಯಾಚುರೇಟೆಡ್ ಆಗಿದ್ದು ಇದು ಬೆಣ್ಣೆ (ಶೇ 63), ಗೋಮಾಂಸದಲ್ಲಿನ ಕೊಬ್ಬು(ಶೇ 50) ಮತ್ತು ಹಂದಿಮಾಂಸದಲ್ಲಿ (ಶೇ 39) ಕೊಬ್ಬಿನಂಶಕ್ಕಿಂತಲೂ ಹೆಚ್ಚಾಗಿದೆ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ