ಪಾಕಿಸ್ತಾನ : ಕಾಶ್ಮೀರ ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತ ಸರ್ಕಾರದ ನಿರ್ಣಯಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ್ದು, ತಕ್ಕ ಉತ್ತರ ನೀಡುವುದಾಗಿ ಪ್ರತಿಕ್ರಿಯೆ ನೀಡಿದೆ.
370 ನೇ ವಿಧಿ ರದ್ದತಿ ಕುರಿತು ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಸಚಿವಾಲಯ, ‘ಜಮ್ಮು ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ವಿವಾದಿತ ಪ್ರದೇಶ. ಭಾರತ ಯಾವುದೇ ರೀತಿಯ ಅಕ್ರಮ ಹೆಜ್ಜೆಯನ್ನಿಟ್ಟರೆ ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧರಾಗಿದ್ದೇವೆ. ಕಾಶ್ಮೀರದೊಂದಿಗೆ ಪಾಕಿಸ್ತಾನಕ್ಕೆ ಇರುವ ಸಂಬಂಧ ಹೀಗೆಯೇ ಮುಂದುವರಿಯುತ್ತದೆ ಎಂಬುದನ್ನು ಪುನರುಚ್ಚರಿಸಲು ಇಷ್ಟಪಡುತ್ತೇವೆ’ ಎಂದು ತಿಳಿಸಿದೆ.
ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಕೇಂದ್ರ ಸರಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ಜೆಡಿಯು, ಸಿಪಿಐ, ಟಿಎಂಸಿ, ಆರ್‌ಜೆಡಿ, ಎಂಡಿಎಂಕೆ ವಿರೋಧ ವ್ಯಕ್ತಪಡಿಸಿವೆ.