ಹೊಸದಿಲ್ಲಿ : ದಕ್ಷಿಣ ಆಫ್ರಿಕಾ ದೇಶದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 ಹೊಸ ತಳಿ ಈ ಇನ್ನೂ ಅನೇಕ ದೇಶಗಳಲ್ಲಿ ಕಾಣಿಸಿಕೊಂಡಿದೆ.
30ಕ್ಕೂ ಹೆಚ್ಚು ರೂಪಾಂತರ ಪಡೆದುಕೊಳ್ಳುತ್ತದೆ ಎನ್ನಲಾಗಿರುವ ಈ ವೈರಸ್, ಹೆಚ್ಚು ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದರಿಂದ ಜಗತ್ತಿನಾದ್ಯಂತ ದೇಶಗಳಲ್ಲಿ ಕಳವಳ ಹೆಚ್ಚಾಗಿದ್ದು, ವೈರಸ್ ಹರಡುವುದನ್ನು ತಡೆಯಲು ಮತ್ತೆ ನಿರ್ಬಂಧಗಳನ್ನು ಹೇರುವತ್ತ ಪರಿಶೀಲನೆ ನಡೆಸುತ್ತಿವೆ.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಹಾಗೂ ಹಾಂಕಾಂಗ್ ಸೇರಿದಂತೆ ವಿವಿಧ ದೇಶಗಳಿಂದ ಒಮಿಕ್ರಾನ್ ಹರಡುವ ಭೀತಿಯೊಂದಿಗೆ ಅನೇಕ ದೇಶಗಳು ಪ್ರಯಾಣಿಕರ ಮೇಲೆ ನಿಷೇಧ ಹೇರಲು ಮುಂದಾಗಿವೆ.
ಈಗಾಗಲೇ ಒಮ್ರಿಕಾನ್ ದೃಢಪಟ್ಟಿರುವ ದೇಶಗಳೊಂದಿಗಿನ ವಿಮಾನ ಸಂಚಾರವನ್ನು ಕೂಡ ಸ್ಥಗಿತಗೊಳಿಸಿವೆ. ಒಮಿಕ್ರಾನ್ ಅನ್ನು ಕಳವಳಕಾರಿ ತಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ (Wಊಔ) ಪಟ್ಟಿ ಮಾಡಿದೆ. ಈ ತಳಿಯ ಪ್ರಸರಣ ಸಾಮರ್ಥ್ಯ, ಕಾಯಿಲೆ ತೀವ್ರತೆ, ಕೋವಿಡ್ ಲಸಿಕೆ, ಪರೀಕ್ಷೆ ಹಾಗೂ ಚಿಕಿತ್ಸೆ ವಿರುದ್ಧದ ಪರಿಣಾಮಗಳ ಬಗ್ಗೆ ತಿಳಿಯಲು ಕೆಲವು ವಾರಗಳು ಬೇಕಾಗುತ್ತದೆ ಎಂದು ಹೇಳಿದೆ.
ಈಗ ಒಮಿಕ್ರಾನ್ ಕೋವಿಡ್ ಪ್ರಕರಣಗಳು ಯಾವ ಯಾವ ದೇಶಗಳಲ್ಲಿ ದೃಢಪಟ್ಟಿದೆ? ಇಲ್ಲಿದೆ ಪಟ್ಟಿ
ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ನೆದರ್ಲ್ಯಾಂಡ್ಸ್, ಬ್ರಿಟನ್, ಇಸ್ರೇಲ್, ಹಾಂಕಾಂಗ್, ಬೋಟ್ಸ್ವಾನಾ, ಬೆಲ್ಜಿಯಂ, ದಕ್ಷಿಣ ಆಫ್ರಿಕಾ